ಕಣ್ಣೂರು: ತನ್ನ ಕಾರಿಗೆ ಒರಗಿ ನಿಂತಿದ್ದ ಬಾಲಕನಿಗೆ ಕಾರಿನ ಚಾಲಕ ಕಾಲಿನಿಂದ ಎದೆಗೆ ಒದ್ದಿರುವ ಮಾನವೀಯತೆಯನ್ನು ಅಣುಕಿಸುವಂತಹ ಘಟನೆ ತಲಶ್ಶೇರಿಯಲ್ಲಿ ನಡೆದಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಲಕ ರಾಜಸ್ಥಾನದ ವಲಸೆ ಕಾರ್ಮಿಕರ ಕುಟುಂಬದವನು ಎಂಬುದು ತಿಳಿದು ಬಂದಿದೆ. ಘಟನೆಯ ಕುರಿತು ಪ್ರತ್ಯಕ್ಷದರ್ಶಿ ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಪೊನ್ನಿಯಂಪಾಲ ನಿವಾಸಿ ಶಿನಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ವೀಡಿಯೋದಲ್ಲಿ 6 ವರ್ಷದ ಬಾಲಕನೊಬ್ಬ ಕಾರಿಗೆ ಒರಗಿ ನಿಂತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ, ಕಾರಿನಿಂದ ಹೊರಗೆ ಬಂದ ವ್ಯಕ್ತಿ, ಬಾಲಕನಿಗೆ ಗದರಿ, ಎದೆಗೆ ಕಾಲಿನಿಂದ ಒದ್ದಿದ್ದಾನೆ. ಏನೂ ತಿಳಿಯದ ಬಾಲಕ ಸದ್ದಿಲ್ಲದೆ ಅಲ್ಲಿಂದ ದೂರ ಸರಿದಿದ್ದಾನೆ. ಬಳಿಕ ಆ ವ್ಯಕ್ತಿ ಮತ್ತೆ ಕಾರಿನೊಳಗೆ ಹೋಗಲು ಮುಂದಾದಾಗ ಈ ಘಟನೆಯನ್ನು ವೀಕ್ಷಿಸುತ್ತಿದ್ದ ಸ್ಥಳೀಯರು ಆತನನ್ನು ಸುತ್ತುವರಿದಿದ್ದಾರೆ.
ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.