ತೀವ್ರ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ತೃಣಮೂಲ ಕಾಂಗ್ರೆಸ್ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ 1200 ಮತಗಳಿಂದ ಗೆಲುವು ಸಾಧಿಸುವುದರೊಂದಿಗೆ ಮಮತಾ ಮತ್ತೊಮ್ಮೆ ಬಂಗಾಳದ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತಗೊಂಡಿದೆ.
ಕೋಲ್ಕತ್ತಾದಿಂದ 125 ಕಿ.ಮೀ ದೂರದಲ್ಲಿರುವ ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮವನ್ನು ಹಿಂದೆ ಕಮ್ಯುನಿಸ್ಟರ ಭದ್ರಕೋಟೆಯೆಂದು ಕರೆಯಲಾಗುತ್ತಿತ್ತು. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಬಲವಂತದ ಭೂಸ್ವಾಧೀನ ವಿರುದ್ಧದ ಆಂದೋಲನವು ಈ ಪ್ರದೇಶದ ರಾಜಕೀಯ ಸಮೀಕರಣವನ್ನೇ ಬದಲಾಯಿಸಿತ್ತು.
ಏಪ್ರಿಲ್ 1 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ನಂದಿಗ್ರಾಮ್‌ನಲ್ಲಿ ಮತದಾನ ನಡೆದಿತ್ತು. ನಂದಿಗ್ರಾಮ ಕ್ಷೇತ್ರ ಈ ಬಾರಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಮಾಜಿ ಸಹೋದ್ಯೋಗಿ ಮತ್ತು ಈಗಿನ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ನಡುವಿನ ಜಿದ್ದಾ ಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿದೆ.