Home ಟಾಪ್ ಸುದ್ದಿಗಳು ಮಾಲ್‌ ಗೆ ಬೆಂಕಿ: ಶಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ; ಹಲವರ ಸ್ಥಿತಿ...

ಮಾಲ್‌ ಗೆ ಬೆಂಕಿ: ಶಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ; ಹಲವರ ಸ್ಥಿತಿ ಗಂಭೀರ

ಒಸಾಕ: ಮಾಲ್‌ ಗೆ ಬೆಂಕಿ ಬಿದ್ದು, 27 ಮಂದಿ ಸಜೀವ ದಹನಗೊಂಡು ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ ಜಪಾನ್‌ ನ ಒಸಾಕಾದಲ್ಲಿ ನಡೆದಿದೆ.

ಮಾಲ್ ನ ನಾಲ್ಕನೆಯ ಅಂತಸ್ತಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲೆಡೆ ದಟ್ಟ ಹೊಗೆಯಾಡುತ್ತಿದ್ದು, ಇದರಿಂದ ಅನೇಕ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ತಪ್ಪಿಸಿಕೊಳ್ಳುವ ಭರದಲ್ಲಿ ದಹಿಸಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕಟ್ಟಡದಲ್ಲಿ ಕ್ಲಿನಿಕ್ ಇತ್ತು. ಜತೆಗೆ ಹಲವಾರು ಪುಸ್ತಕದ ಮಳಿಗೆಗಳು ಇದ್ದವು. ಎಲ್ಲವೂ ಹೊತ್ತಿ ಉರಿದಿದೆ. ಅಲ್ಲದೆ ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಒಸಾಕಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ಕಿಶಿಮೊಟೊ ತಿಳಿಸಿದ್ದಾರೆ.

Join Whatsapp
Exit mobile version