ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬದಿಯಲ್ಲಿ ಗುಂಡೇಟಿಗೆ ಕಾಡು ಕೋಣ ಬಲಿಯಾಗಿದೆ.
ನಾಗರಹೊಳೆ ಆನೆಚೌಕೂರು ವನ್ಯಜೀವಿ ವಲಯ ವ್ಯಾಪ್ತಿಯ ದೇವಮಚ್ಚಿ ಶಾಖೆಯ ಸಿಂಗನೂರು ಗಸ್ತಿನಲ್ಲಿ ಸುಮಾರು ಎಂಟು ವರ್ಷದ ಮೈಸೂರು ಕಾಡು ಕೋಣದ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಹುಣಸೂರು ಉಪ ವಿಭಾಗದ ಎಸಿಎಫ್ ದಯಾನಂದ್, ವಲಯ ಅರಣ್ಯಾಧಿಕಾರಿ ದಿಲೀಪ್, ಡಿ.ಆರ್.ಎಫ್.ಓ. ವಿನೋದ್ ಕುಮಾರ್ ಹಾಗೂ ಎಸ್.ಟಿ.ಪಿ.ಎಫ್ ಸಿಬ್ಬಂದಿ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಎಫ್ ದಯಾನಂದ್ ತಿಳಿಸಿದ್ದಾರೆ.
ನಾಗರಹೊಳೆ ಉದ್ಯಾನದ ಪಶುವೈದ್ಯ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.