Home ಟಾಪ್ ಸುದ್ದಿಗಳು ಇಸ್ರೇಲ್ ನಾಗರಿಕರಿಗೆ ಪ್ರಯಾಣ ನಿಷೇಧ ಹೇರಲು ಮಾಲ್ಡೀವ್ಸ್ ಚಿಂತನೆ

ಇಸ್ರೇಲ್ ನಾಗರಿಕರಿಗೆ ಪ್ರಯಾಣ ನಿಷೇಧ ಹೇರಲು ಮಾಲ್ಡೀವ್ಸ್ ಚಿಂತನೆ

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಆಕ್ರಮಣ ಮುಂದುವರೆದಿದ್ದು, ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವ ಸಲುವಾಗಿ ರಾಷ್ಟ್ರೀಯ ವಲಸೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಮಾಲ್ಡೀವ್ಸ್ ಸಂಸತ್ತಿನ ಸದಸ್ಯ ಮೊಹಮ್ಮದ್ ನಶೀದ್ ಅಬ್ದುಲ್ಲಾ ನವೆಂಬರ್ 20 ರಂದು ಮಂಡಿಸಿದರು.


ಗಾಝಾ ಮೇಲೆ ಇಸ್ರೇಲ್ ನ ಮಾರಣಾಂತಿಕ ಮುತ್ತಿಗೆಯ ಹಿನ್ನೆಲೆಯಲ್ಲಿ ತನ್ನ ನಾಗರಿಕರ ಮೇಲೆ ಪ್ರಯಾಣ ನಿಷೇಧದ ಮೂಲಕ ಟೆಲ್ ಅವೀವ್ ಮೇಲೆ ನಿರ್ಬಂಧಗಳನ್ನು ವಿಧಿಸುವುದು ವಲಸೆ ಕಾಯ್ದೆಯ ತಿದ್ದುಪಡಿಯ ಉದ್ದೇಶವಾಗಿದೆ ಎಂದು ಸಂಸದರು ದೃಢಪಡಿಸಿದರು. ಅಕ್ರಮಣ ಪ್ರಾರಂಭವಾದಾಗಿನಿಂದ ಇಸ್ರೇಲ್ 5,000 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 12,300 ಕ್ಕೂ ಹೆಚ್ಚು ಫೆಲೆಸ್ತೀನ್ ನಾಗರಿಕರನ್ನು ಕೊಂದಿದೆ ಎಂದು ಹೇಳಿದ್ದಾರೆ.


ಮಾಲ್ಡೀವ್ಸ್ ಆರ್ಗನೈಸೇಶನ್ ಫಾರ್ ಇಸ್ಲಾಮಿಕ್ ಕಾರ್ಪೊರೇಷನ್ (ಒಐಸಿ) ಸದಸ್ಯ ರಾಷ್ಟ್ರವಾಗಿದ್ದು, ಇದು ಈಗಾಗಲೇ ಇಸ್ರೇಲಿ ನಾಗರಿಕರ ಮೇಲೆ ಪ್ರಯಾಣ ನಿಷೇಧವನ್ನು ಹೇರಿದೆ. ಅಬ್ದುಲ್ಲಾ ಅವರು ಐಒಸಿಯ ಉಳಿದ ಭಾಗಗಳೊಂದಿಗೆ ಹೊಂದಾಣಿಕೆಯಲ್ಲಿ ತಮ್ಮ ಪ್ರಸ್ತಾಪವನ್ನು ಅಂಗೀಕರಿಸಲು ಒತ್ತಾಯಿಸುತ್ತಿದ್ದಾರೆ ಮತ್ತು ಪ್ಯಾಲೆಸ್ಟೈನ್ ನೊಂದಿಗೆ ಮಾಲ್ಡೀವ್ಸ್ ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವಾರ, ಪ್ರತಿಭಟನಾಕಾರರು ಮಾಲ್ಡೀವ್ಸ್ ಸಂಸತ್ತಿನ ಮುಂದೆ ಜಮಾಯಿಸಿ, ಗಾಝಾದಲ್ಲಿ ಇಸ್ರೇಲ್ ನ ಕ್ರಮಗಳು ಮತ್ತು ಹಿಂಸಾಚಾರದ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸಿದರು ಮತ್ತು ತಕ್ಷಣದ ಪ್ರಯಾಣ ನಿಷೇಧಕ್ಕೆ ಕರೆ ನೀಡಿದ್ದರು.

Join Whatsapp
Exit mobile version