ಏರ್ ಇಂಡಿಯಾ ವಿಮಾನದಲ್ಲಿ ಮಲಯಾಳಂ ನಟಿ ದಿವ್ಯಾ ಪ್ರಭಾಗೆ ಕಿರುಕುಳ: ದೂರು ದಾಖಲು

Prasthutha|

ಕೊಚ್ಚಿ: ಏರ್ ಇಂಡಿಯಾ ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿ ದಿವ್ಯಾ ಪ್ರಭಾ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -


ಮುಂಬೈನಿಂದ ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 681 ರಲ್ಲಿ ಮಂಗಳವಾರ (ಅ.10) ಘಟನೆ ನಡೆದಿರುವುದಾಗಿ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


‘ಅಮಲಿನಲ್ಲಿದ್ದ ಪ್ರಯಾಣಿಕ ನನ್ನ ಸೀಟ್ನಲ್ಲಿ ಕುಳಿತುಕೊಂಡಿದ್ದನಲ್ಲದೆ ‘ಅನುಚಿತವಾಗಿ ವರ್ತಿಸಿದ್ದಾನೆ ಅಲ್ಲದೆ ದೇಹವನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ’ ಎಂದು ದೂರಿದ್ದಾರೆ.
ಈ ಬಗ್ಗೆ ನೆಡುಂಬಸ್ಸೆರಿ ಪೊಲೀಸರು ಬುಧವಾರ ಪ್ರತಿಕ್ರಿಯಿಸಿದ್ದು, ‘ಇ– ಮೇಲ್ ಮೂಲಕ ದೂರು ಬಂದಿದೆ. ಆದರೆ ಇನ್ನೂ ಎಫ್ಐಆರ್ ದಾಖಲಿಸಿಲ್ಲ. ದಿವ್ಯಾ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು’ ಎಂದಿದ್ದಾರೆ.

Join Whatsapp