Home ಟಾಪ್ ಸುದ್ದಿಗಳು ಮಲಯಾಳಂ ನಟ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು

ಮಲಯಾಳಂ ನಟ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು

ತಿರುವನಂತಪುರಂ: ನಟಿಯೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕೊಚ್ಚಿ ನಗರ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಬಂಧನದ ಭೀತಿಯಿಂದ ಬಾಬು ದೇಶ ಬಿಟ್ಟು ಪರಾರಿಯಾಗಿದ್ದರು. ಹೈಕೋರ್ಟ್ ಬಂಧನದಿಂದ ರಕ್ಷಣೆ ನೀಡಿದ ನಂತರ ಅವರು ಮೇ ಕೊನೆಯ ವಾರದಲ್ಲಿ ಕೊಚ್ಚಿಗೆ ಮರಳಿದ್ದರು.

ನಟಿಯೊಂದಿಗೆ ಕೇವಲ ಒಮ್ಮತದ ಸಂಬಂಧ ಇತ್ತು. ಚಲನಚಿತ್ರಗಳಲ್ಲಿ ಪಾತ್ರಗಳು ಸಿಗದ ಹಿನ್ನೆಲೆ ಮಹಿಳಾ ನಟಿ ತನ್ನ ವಿರುದ್ಧ ತಿರುಗಿಬಿದ್ದರು ಎಂದು ಅವರು ಪೊಲೀಸರ ವಿಚಾರಣೆ ವೇಳೆ ಹೇಳಿದ್ದರು.

Join Whatsapp
Exit mobile version