Home ಟಾಪ್ ಸುದ್ದಿಗಳು ಮಲಯಾಳಂ ನಟ ಮೋಹನ್ ರಾಜ್ ನಿಧನ

ಮಲಯಾಳಂ ನಟ ಮೋಹನ್ ರಾಜ್ ನಿಧನ

ಬೆಂಗಳೂರು: ಮಲಯಾಳಂ ನಟ ಮೋಹನ್ ರಾಜ್ (69) ಅವರು ನಿಧನರಾಗಿದ್ದಾರೆ.


ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ತಮ್ಮ ಮನೆಯಲ್ಲಿ ಶುಕ್ರವಾರ ನಿಧನರಾದರು ಎಂದು ವರದಿಗಳು ತಿಳಿಸಿವೆ.


1988 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ಮೋಹನ್ ರಾಜ್ ಅವರು 1989 ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ‘ಕಿರೀಡಂ’ ಮಲಯಾಳಂ ಸಿನಿಮಾದಲ್ಲಿ ‘ಕಿರಿಕಾದನ್ ಜೋಸ್’ ಹೆಸರಿನ ಖಳನಟನಾಗಿ ಮಿಂಚಿದ್ದರು.


‘ಕಿರೀಡಂ’ ಸಿನಿಮಾ ಕನ್ನಡಲ್ಲಿ ‘ಮೋಡದ ಮರೆಯಲ್ಲಿ’ ಎಂಬ ಹೆಸರಿನಿಂದ ರಿಮೇಕ್ ಆಗಿ 1991 ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್–ಯಮುನಾ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ‘ಜೀವ ನೀನು, ದೇಹ ನಾನು’ ಚಿತ್ರಗೀತೆ ಸಾಕಷ್ಟು ಜನಪ್ರಿಯವಾಗಿದೆ.

Join Whatsapp
Exit mobile version