ಭೀಕರ ವಿಮಾನ ದುರಂತ: ಮಲಾವಿ ದೇಶದ ಉಪಾಧ್ಯಕ್ಷ ಸೇರಿ 10 ಮಂದಿ ಮೃತ್ಯು

Prasthutha|

ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ವಿಮಾನ ದುರಂತದಲ್ಲಿ ಮರಣ ಹೊಂದಿದ ಘಟನೆ ಮಾಸುವ ಮುನ್ನವೇ ಮತ್ತೊಂದು ದೇಶದ ಉನ್ನತ ನಾಯಕ ವಿಮಾನ ಅಪಘಾತಕ್ಕೆ ಬಲಿಯಾಗಿದ್ದಾರೆ.

- Advertisement -

ಮಲಾವಿ ರಾಷ್ಟ್ರದ ಉಪಾಧ್ಯಕ್ಷ ಸೇರಿದಂತೆ 10 ಮಂದಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.


ಸೌಲೋಸ್ ಮತ್ತಿತರರು ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿತ್ತೆಂದು ಈ ಹಿಂದೆ ವರದಿಯಾಗಿತ್ತು. ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ವಿಮಾನವು ಚಕಿಂಗವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ವಿಮಾನ ದುರಂತದಲ್ಲಿ ಯಾರೊಬ್ಬರು ಬದುಕಿರುವ ಸಾಧ್ಯತೆಗಳಿಲ್ಲ ಎಂದು ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ವಿಮಾನ ದೇಶದ ಉತ್ತರದಲ್ಲಿರುವ ದಟ್ಟಕಾಡುಗಳ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಶಂಕಿಸಲಾಗಿದೆ.

Join Whatsapp
Exit mobile version