ಮಲಪ್ಪುರಂ: ನಾಪತ್ತೆಯಾಗಿದ್ದ ನವವಧುವಿನ ಮೃತದೇಹ ನದಿಯಲ್ಲಿ ಪತ್ತೆ

Prasthutha|

ಮಲಪ್ಪುರಂ: ಶನಿವಾರ ಸಂಜೆ ಮನೆಯಿಂದ ಹೊರಟು, ಬಳಿಕ ನಾಪತ್ತೆಯಾಗಿದ್ದ ನವ ವಧುವಿನ ಮೃತದೇಹ ಭಾನುವಾರ ನದಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಮೃತ ಆರ್ಯ (26) ಮಲಪ್ಪುರಂ ನಿವಾಸಿಯಾಗಿದ್ದು, ಶನಿವಾರ ಸಂಜೆ 4 ಗಂಟೆಗೆ ಸ್ಕೂಟರ್‌ನಲ್ಲಿ ತನ್ನ ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದರು. ಆರ್ಯ ಅವರ ಸಂಬಂಧಿಕರು, ಸ್ಥಳೀಯರು ಹುಡುಕಾಟ ನಡೆಸಿದಾಗ ಕಡಲುಂಡಿ ನದಿಯ ದಡದಲ್ಲಿ ಆಕೆಯ ಸ್ಕೂಟರ್ ಮತ್ತು ಶೂ ಪತ್ತೆಯಾಗಿತ್ತು..

- Advertisement -

ನದಿಯ ಬಳಿ ರಾತ್ರಿಯಿಡೀ ಆರ್ಯಗಾಗಿ ಹುಡುಕಾಟ ನಡೆಸಲಾಯಿತಾದರೂ ಪ್ರಯೋಜನವಾಗಿರಲಿಲ್ಲ. ಭಾನುವಾರ ಮಧ್ಯಾಹ್ನದ ವೇಳೆಗೆ ತೊಟ್ಟಕಡವು ಎಂಬಲ್ಲಿ ನದಿಯಲ್ಲಿ ಆರ್ಯ ಶವ ಪತ್ತೆಯಾಗಿದೆ.

ಕಕ್ಕೋಡು ಮೂಲದ ಆರ್ಯ ಮತ್ತು ಶಾಶ್ವತ್ ಅವರ ವಿವಾಹವು ಕಳೆದ ಸೋಮವಾರವಷ್ಟೇ ನಡೆದಿತ್ತು. ಶನಿವಾರ ಆರ್ಯ ತನ್ನ ಮನೆಗೆ ಬಂದಿದ್ದಳು. ಮೃತದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದ್ದು, ಸಾವಿನ ಹಿಂದಿನ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.



Join Whatsapp