Home ಟಾಪ್ ಸುದ್ದಿಗಳು ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶ ಮುನ್ನಡೆಸಲು ಒಮ್ಮತ ಅಗತ್ಯ: ಮೋದಿ

ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶ ಮುನ್ನಡೆಸಲು ಒಮ್ಮತ ಅಗತ್ಯ: ಮೋದಿ

ನವದೆಹಲಿ: ಸಂಸದೀಯ ಸಭೆಯಲ್ಲಿ ಎನ್ ಡಿಎ ಸಂಸದರು ಇಂದು 18ನೇ ಲೋಕಸಭಾ ನಾಯಕನನ್ನಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದ್ದಾರೆ.


ಬಳಿಕ ಮಾತನಾಡಿದ ಮೋದಿ, ‘‘ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು. ಸರ್ಕಾರ ನಡೆಸಲು ಬಹುಮತ ಬೇಕು, ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ. ದೇಶವನ್ನು ನಡೆಸಲು ಏಕಾಭಿಪ್ರಾಯ ಬಹಳ ಮುಖ್ಯ ಎಂದು ಹೇಳಿದ್ದಾರೆ.


2019 ರಲ್ಲಿ, ನೀವೆಲ್ಲರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೆ ಅದು ನಂಬಿಕೆ. ಇಂದು ನೀವು ಮತ್ತೊಮ್ಮೆ ನನಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದೀರಿ ಎಂದರೆ ನಮ್ಮ ನಡುವಿನ ನಂಬಿಕೆಯ ಸೇತುವೆ ತುಂಬಾ ಬಲವಾಗಿದೆ. ಈ ಕ್ಷಣವೂ ಭಾವನಾತ್ಮಕವಾಗಿದೆ ಎಂದರು.


ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತು ಸಮ್ಮಿಶ್ರ ರಾಜಕೀಯದ ಇತಿಹಾಸದಲ್ಲಿ, ಚುನಾವಣಾ ಪೂರ್ವ ಮೈತ್ರಿ ಎಂದಿಗೂ ಎನ್ಡಿಎ ಬಲ ನೀಡಿರಲಿಲ್ಲ. ಇದು ಮೈತ್ರಿಕೂಟದ ಗೆಲುವು ಎಂದು ಹೇಳಿದ್ದಾರೆ.

Join Whatsapp
Exit mobile version