Home ಟಾಪ್ ಸುದ್ದಿಗಳು ಸಿದ್ದೀಕ್ ಕಾಪ್ಪನ್ ರನ್ನು ಒಂದು ವರ್ಷ ಜೈಲು ಶಿಕ್ಷೆಗೊಳಪಡಿಸಿದ ದೇಶದಲ್ಲಿ ಗಾಂಧಿ ಬೋಧನೆಗಳು ಉಳಿಯಲಿ: ಸಂಸದೆ...

ಸಿದ್ದೀಕ್ ಕಾಪ್ಪನ್ ರನ್ನು ಒಂದು ವರ್ಷ ಜೈಲು ಶಿಕ್ಷೆಗೊಳಪಡಿಸಿದ ದೇಶದಲ್ಲಿ ಗಾಂಧಿ ಬೋಧನೆಗಳು ಉಳಿಯಲಿ: ಸಂಸದೆ ಮಹುವ ಮೊಯಿತ್ರಾ

ಹೊಸದಿಲ್ಲಿ: ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ಉತ್ತರಪ್ರದೇಶ ಪೊಲೀಸರು ಅನ್ಯಾಯವಾಗಿ ಬಂಧಿಸಿ ಜೈಲಿನಲ್ಲಿರಿಸಿರುವುದರ ವಿರುದ್ಧ ತೃಣಮೂಲ ಕಾಂಗ್ರೆಸ್ ನಾಯಕಿ, ಸಂಸದೆ ಮಹುವ ಮೊಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಟ್ವಿಟರ್ ಖಾತೆಯಲ್ಲಿ ಗಾಂಧಿ ಜಯಂತಿ ಶುಭಾಶಯ ಪೋಸ್ಟ್ ಮಾಡಿದ ಮಹುವ ಮೊಯಿತ್ರಾ ಸಿದ್ದೀಕ್ ಕಾಪ್ಪನ್ ಅವರನ್ನು ಅನ್ಯಾಯವಾಗಿ ಜೈಲಿನಲ್ಲಿರಿಸಿದ ಆಡಳಿತ ವರ್ಗದ ಕ್ರೂರತೆಯನ್ನು ಟೀಕಿಸಿದರು.

“ಮಾಡದ ತಪ್ಪಿಗೆ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ಒಂದು ವರ್ಷದಿಂದ ಜೈಲಿನಲ್ಲಿರಿಸಿದ ದೇಶದಲ್ಲಿ ಮಹಾತ್ಮಾ ಗಾಂಧಿಯ ಬೋಧನೆಗಳು ಉಳಿಯಲಿ” ಎಂದು ಅವರು ಹಾರೈಸಿದರು.

‘ಗಾಂಧಿ ಜಯಂತಿಯ ದಿನದಂದು, ಬರೆಯಲಾಗದ ಲೇಖನವನ್ನು ಬರೆದಿದ್ದಕ್ಕಾಗಿ ಮತ್ತು ಇನ್ನೂ ತಲುಪದ ಸ್ಥಳದಲ್ಲಿ ಹಿಂಸೆಯನ್ನು ಪ್ರಚೋದಿಸಿದ್ದಕ್ಕಾಗಿ ಸಿದ್ದೀಕ್ ಕಾಪ್ಪನ್ ಅವರನ್ನು ಒಂದು ವರ್ಷದಿಂದ ಜೈಲಿನಲ್ಲಿರಿಸಿದ ದೇಶದಲ್ಲಿ ಮಹಾತ್ಮರ ಬೋಧನೆಗಳು ಉಳಿಯಲಿ’ ಎಂದು ಮಹುವ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version