Home ಟಾಪ್ ಸುದ್ದಿಗಳು ಕಾಳಿ ಮಾತೆ ಕುರಿತಾದ ಮಹುವಾ ಮೊಯಿತ್ರಾ ಹೇಳಿಕೆ: ಬೆಂಬಲಕ್ಕೆ ನಿಂತ ಶಶಿ ತರೂರ್‌

ಕಾಳಿ ಮಾತೆ ಕುರಿತಾದ ಮಹುವಾ ಮೊಯಿತ್ರಾ ಹೇಳಿಕೆ: ಬೆಂಬಲಕ್ಕೆ ನಿಂತ ಶಶಿ ತರೂರ್‌

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರ ಕಾಳಿ ಮಾತೆ ಕುರಿತಾದ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುತ್ತಿರುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಆಚರಣೆಗಳು ವೈಯಕ್ತಿಕವಾಗಿದ್ದು, ಅವರವರ ಇಚ್ಛೆಯಂತೆ ಖಾಸಗಿಯಾಗಿ ಆಚರಿಸಲು ಬಿಡಬೇಕು. ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬಾರದು ಎಂದು ಶಶಿ ತರೂರ್‌ ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ತಮ್ಮಿಚ್ಛೆಯಂತೆ ದೇವರನ್ನು ಪೂಜಿಸುವ ಹಕ್ಕು ಇದೆ ಕಾಳಿ ಮಾತೆಯನ್ನು ಮಾಂಸಾಹಾರ ಮತ್ತು ಮದ್ಯ ಸೇವನೆ ಮಾಡುವ ದೇವತೆ ಎಂದು ಪೂಜಿಸುತ್ತೇನೆ ಎಂದು ಮೊಯಿತ್ರಾ ಮಂಗಳವಾರ ಟ್ವೀಟ್‌ ಮಾಡಿದ್ದರು.

ಮಹುವಾ ಟ್ವೀಟ್‌ ವಿರುದ್ಧ ಟೀಕೆಗಿಳಿದ ಬಿಜೆಪಿ ನಾಯಕರು, ಹಿಂದೂ ದೇವರನ್ನು ಅವಮಾನಿಸಿದ್ದಾರೆ, ಆಡಳಿತ ಪಕ್ಷವು ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಹೇಳಿಕೆಯಿಂದ ಟಿಎಂಸಿ ಅಂತರ ಕಾಯ್ದುಕೊಂಡಿದೆ.

Join Whatsapp
Exit mobile version