Home ಕರಾವಳಿ ಎಸ್.ಡಿ.ಪಿ.ಐ ವಾಲ್ಪಾಡಿ ಗ್ರಾಮ ಸಮಿತಿ ವ್ಯಾಪ್ತಿಯ ಮಹಿಳಾ ಸ್ನೇಹ ಸಮ್ಮಿಲನ

ಎಸ್.ಡಿ.ಪಿ.ಐ ವಾಲ್ಪಾಡಿ ಗ್ರಾಮ ಸಮಿತಿ ವ್ಯಾಪ್ತಿಯ ಮಹಿಳಾ ಸ್ನೇಹ ಸಮ್ಮಿಲನ

ಮೂಡಬಿದಿರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡಬಿದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಪಾಡಿ ಗ್ರಾಮ ಸಮಿತಿ ಗೊಳಪಟ್ಟ ಮಹಿಳಾ ಕಾರ್ಯಕರ್ತೆಯರ ಸ್ನೇಹ ಸಮ್ಮಿಲನವು ಇತ್ತೀಚೆಗೆ ವಾಲ್ಪಾಡಿಯಲ್ಲಿ ಜರುಗಿತು.
ಮೂಡಬಿದರೆ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಭಾಗವಹಿಸಿ ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು.
ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಮೂಡಬಿದರೆ ಚುನಾವಣಾ ಮಹಿಳಾ ಉಸ್ತುವಾರಿ ಆಯಿಷಾ ಬಜ್ಪೆ, ಝೀನತ್, ವಾಲ್ಪಾಡಿ ಗ್ರಾಮದ ಎಸ್.ಡಿ.ಪಿ.ಐ ನಾಯಕರಾದ ಷರೀಫ್ ವಾಲ್ಪಾಡಿ, ರಮೀಝ್ ವಾಲ್ಪಾಡಿ ಹಾಗೂ ಅಲ್ತಾಫ್ ವಾಲ್ಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಹಲವಾರು ವಾಲ್ಪಾಡಿ ಗ್ರಾಮದ ಪಕ್ಷದ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Join Whatsapp
Exit mobile version