ಹೊಸದಿಲ್ಲಿ: ನಾನು ನಂಬಿದವರೇ ನನ್ನ ಬೆನ್ನ ಹಿಂದೆ ಇರಿದರು. ನನ್ನನ್ನು ತೊರೆಯುತ್ತಾರೆಂದು ನಿರೀಕ್ಷಿಸಿದ ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಉದ್ಧವ್ ಠಾಕ್ರೆ ಭಾವನಾತ್ಮಕವಾಗಿ ಹೇಳಿದ್ದಾರೆ.
ಬಂಡಾಯಗಾರರು ಬಯಸಿದರೆ ಕಾಂಗ್ರೆಸ್ ಸರಕಾರದಿಂದ ಹೊರಬರುತ್ತದೆ ಹಾಗೂ ಬಾಹ್ಯ ಬೆಂಬಲವನ್ನು ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ್ ನನಗೆ ಹೇಳಿದ್ದರು. ನನ್ನನ್ನು ತೊರೆಯುತ್ತಾರೆ ಎಂದು ನಿರೀಕ್ಷಿಸಿದವರು ನನ್ನ ಬೆಂಬಲಕ್ಕೆ ನಿಂತರು. ನನ್ನವರೇ ನನ್ನನ್ನು ತೊರೆದರು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮಹಾ ಆಘಾಡಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಅವರು ಬುಧವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.