Home ಕರಾವಳಿ ಮಹಾಲಕ್ಷ್ಮಿ ಕೋ-ಅಪರೇಟಿವ್ ಸೊಸೈಟಿಯ ಮ್ಯಾನೇಜರ್ ಆತ್ಮಹತ್ಯೆ: ಸಂಘಪರಿವಾರದ ಮುಖಂಡ ಯಶಪಾಲ್ ಸುವರ್ಣ ವಿರುದ್ಧ FIR ದಾಖಲು

ಮಹಾಲಕ್ಷ್ಮಿ ಕೋ-ಅಪರೇಟಿವ್ ಸೊಸೈಟಿಯ ಮ್ಯಾನೇಜರ್ ಆತ್ಮಹತ್ಯೆ: ಸಂಘಪರಿವಾರದ ಮುಖಂಡ ಯಶಪಾಲ್ ಸುವರ್ಣ ವಿರುದ್ಧ FIR ದಾಖಲು

ಉಡುಪಿ: ಮಹಾಲಕ್ಷ್ಮಿ ಕೋಪರೇಟಿವ್‌ ಸೊಸೈಟಿಯ ವ್ಯವಸ್ಥಾಪಕ, ಪರಿಶಿಷ್ಟ ಜಾತಿಯ ಸುಬ್ಬಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ಮುಖಂಡ, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಫಾಲ್‌ ಸುವರ್ಣ ಸೇರಿದಂತೆ ಐವರ ವಿರುದ್ಧ FIR ದಾಖಲಿಸಲಾಗಿದೆ.


ಮೃತ ಸುಬ್ಬಣ್ಣನವರ ಸಹೋದರ ಸುರೇಶ್‌ ಅವರು ನೀಡಿದ ದೂರಿನಂತೆ ಸಂಘಪರಿವಾರದ ಮುಖಂಡ, ಬ್ಯಾಂಕಿನ ಆಧ್ಯಕ್ಷ ಯಶಪಾಲ್‌ ಸುವರ್ಣ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮೊಗವೀರ, ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಕೆ.ಸೀನಾ ಗಂಗೊಳ್ಳಿ, ಮ್ಯಾನೇಜರ್‌ ಸಾರಿಕಾ, ಸಾಲಗಾರ ರಿಯಾಝ್‌ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.


ಅಣ್ಣನ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯವರ ಅಸಹಕಾರ ಮತ್ತು ರಿಯಾಜ್ ಎಂಬ ವ್ಯಕ್ತಿಯ ಮೋಸದ ನಡವಳಿಕೆ ಕಾರಣ ವಾಗಿರುತ್ತದೆ. ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್ ಎ ಸುವರ್ಣ, ಎಂ ಡಿ ಜಗದೀಶ್, ಮೊಗವೀರ, Ex ಎಂಡಿ ಜೆ ಕೆ ಸೀನ ಗಂಗೊಳ್ಳಿ,, ಮಾನೇಜರ್ ಸಾರಿಕಾ ಸಾಲಗಾರ ರಿಯಾಜ್ ಇವರುಗಳು ನೀಡಿದ ಮಾನಸಿಕ ಒತ್ತಡ ಕಿರುಕುಳ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬಬೇಕೆಂದು ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಸಿರುತ್ತಾರೆ, ಪಿರ್ಯಾದಿದಾರರ ಅಣ್ಣನ ಸಾವಿನಲಿ, ಸಂಶಯವಿದ್ದು ಅದರಿಂದ ಆಡಳಿತ ಮಂಡಳಿ ಮತ್ತು ಸಾಲಗಾರ ರಿಯಾಝ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಈ ಕುರಿತು ಮಲ್ಪೆ ಠಾಣೆಯಲ್ಲಿ ಎಸ್ಸಿ ಎಸ್ಟಿ ಕಾಯಿದೆಯ 3(2) ಮತ್ತು ಐಪಿಸಿ 306 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version