ನವದೆಹಲಿ: ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಹಿಂದೂಸ್ತಾನ್ ಯೂನಿಲಿವರ್ [ಹೆಚ್ಯುಎಲ್] ಮತ್ತು ನೆಸ್ಲೆ ಇಂಡಿಯಾ ಕಂಪನಿಗಳು ಮತ್ತೊಂದು ಶಾಕ್ ನೀಡಿವೆ.
ಫಟಾಫಟ್ ತಿಂಡಿ ಮ್ಯಾಗಿ ಸೇರಿದಂತೆ ಬ್ರೂ ಕಾಫಿ, ನೆಸ್’ಕಫೆ, ತಾಜ್’ಮಹಲ್ ಟೀ ಪೌಡರ್, ಹಾಲು ಸೇರಿದಂತೆ ತಮ್ಮ ಜನಪ್ರಿಯ ಉತ್ಪನ್ನಗಳ ದರ ಹೆಚ್ಚಳಕ್ಕೆ ಎರಡೂ ಕಂಪನಿಗಳು ನಿರ್ಧರಿಸಿವೆ.
ನೆಸ್ಲೆ ಇಂಡಿಯಾ ಮ್ಯಾಗಿ ಬೆಲೆಯನ್ನು ಶೇ.9ರಿಂದ 16ರಷ್ಟು ಹೆಚ್ಚಿಸಿದೆ. ಹೆಚ್ಯುಎಲ್ ಬ್ರೂ ಕಾಫಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್ನ ಬೆಲೆಯನ್ನು ಶೇ. 3ರಿಂದ 4ರಷ್ಟು ಹೆಚ್ಚಿಸಿದೆ.
ನೆಸ್ಲೆ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಗಳನ್ನು ಕೂಡ ಹೆಚ್ಚಿಸಿದೆ. ಸದ್ಯ 70 ಗ್ರಾಂ ಮ್ಯಾಗಿ ಪ್ಯಾಕೆಟ್‍ಗೆ 12 ರೂಪಾಯಿ ಇದ್ದ ದರ ಇನ್ಮುಂದೆ 14 ರೂಪಾಯಿ ಆಗಲಿದೆ. 140 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ. 96 ರೂಪಾಯಿಯ 560 ಗ್ರಾಂ ಮ್ಯಾಗಿ ಪ್ಯಾಕ್’ನದರ 105 ರೂಪಾಯಿ ಆಗಲಿದೆ ಎಂದು CNBC-TV18 ವರದಿ ಮಾಡಿದೆ