ಸಿಎಎ ವಿರುದ್ಧ ಪ್ರತಿಭಟಿಸಿದ ಯುವಕನ ವಿರುದ್ಧ ತಮಿಳುನಾಡು ಪೊಲೀಸರು ದಾಖಲಿಸಿದ FIR ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್

Prasthutha|

ಸಿಎಎ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಜಾಫರ್ ಸಾದಿಕ್ ಎಂಬ ಯುವಕನ ವಿರುದ್ಧ ಕನ್ಯಾಕುಮಾರಿ ಪೊಲೀಸರು ಸಲ್ಲಿಸಿದ್ದ ಎಫ್‌ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದೆ. ಯುವಕ ನಡೆಸಿದ ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ನ್ಯಾಯಮೂರ್ತಿ ಆರ್. ಹೇಮಲತಾ ನೇತೃತ್ವದ ಮದ್ರಾಸ್ ಹೈಕೋರ್ಟ್ ನ ಪೀಠ ಹೇಳಿದೆ.

- Advertisement -

ಕನ್ಯಾಕುಮಾರಿ ಜಿಲ್ಲೆಯ ಭೂತಪ್ಪಾಂಡಿ ಪೊಲೀಸ್ ಠಾಣೆಯಲ್ಲಿ ಜಾಫರ್ ಸಾದಿಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ 12 ರಂದು ಸ್ಪೆಷಲ್ ಸಬ್‌ ಇನ್ಸ್‌ಪೆಕ್ಟರ್ ಗಸ್ತು ತಿರುಗುತ್ತಿದ್ದ ಸಂದರ್ಭ ಜಾಫರ್ ಸಾದಿಕ್ ಮತ್ತು ಆತನ ಸ್ನೇಹಿತರು ಸಿಎಎ ಕಾನೂನನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅಡಚಣೆ ಮತ್ತು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸ್ಪೆಷಲ್ ಸಬ್ ಇನ್ಸ್‌ಪೆಕ್ಟರ್ ಸ್ವತಃ ಈ ಪ್ರಕರಣದ ಮುಖ್ಯ ದೂರುದಾರರಾಗಿದ್ದಾರೆ.

ಆದರೆ, ಪ್ರತಿಭಟನೆಯಲ್ಲಿ ಯಾವುದೇ ಹಿಂಸೆ ಅಥವಾ ಅಹಿತಕರ ಘಟನೆ ಸಂಭವಿಸಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಪ್ರತಿಭಟನೆ ಶಾಂತಿಯುತವಾಗಿತ್ತು, ದೂರಿನಲ್ಲಿ ತಿಳಿಸಿರುವಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Join Whatsapp