Home ಕರಾವಳಿ ಮಡಿಕೇರಿಯ ಎಸ್.ಐ.ಚಿನ್ನಪ್ಪ ನಾಯ್ಕ ಹೃದಯಾಘಾತದಿಂದ ನಿಧನ

ಮಡಿಕೇರಿಯ ಎಸ್.ಐ.ಚಿನ್ನಪ್ಪ ನಾಯ್ಕ ಹೃದಯಾಘಾತದಿಂದ ನಿಧನ

ಕಡಬ: ಮಡಿಕೇರಿ ಯಲ್ಲಿ ಎಸ್.ಐ.ಆಗಿರುವ ಸುಳ್ಯ ತಾಲೂಕು ನಡುಗಲ್ಲು ನಿವಾಸಿ ಚಿನ್ನಪ್ಪ ನಾಯ್ಕ (59ವ.) ಡಿ.15 ರಂದು ಮುಂಜಾನೆ ಹೃದಯಾಘಾತದಿಂದ ನಿಧನಹೊಂದಿದ್ದಾರೆ.


ಚಿನ್ನಪ್ಪ ನಾಯ್ಕ ಅವರು ರಜೆಯಲ್ಲಿ ಮನೆಯಲ್ಲಿದ್ದು ಮುಂಜಾನೆ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು. ಮೃತ ಚಿನ್ನಪ್ಪ ನಾಯ್ಕ ಅವರು ನವೆಂಬರ್ ತಿಂಗಳಿನಲ್ಲಿ ಎಸ್.ಐ.ಆಗಿ ಬಡ್ತಿಗೊಂಡಿದ್ದರು. ಇವರು ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದರು.

ನಿವೃತ್ತಿ ಯ ಹಿನ್ನೆಲೆಯಲ್ಲಿ ರಜೆ ಪಡೆದಿದ್ದ ಅವರು ಆರೋಗ್ಯವಾಗಿದ್ದು ಹಠಾತ್ ಆಗಿ ಅಸ್ವಸ್ಥಗೊಂಡಿದ್ದರು. ಇವರು ತಂದೆ ರಾಮಣ್ಣ ನಾಯ್ಕ, ತಾಯಿ ಕಮಲ, ಪತ್ನಿ ಲೀಲಾವತಿ, ಪುತ್ರ ಸೃಜನ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಡಬ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದ್ದು ಕಡಬ ಎಸ್.ಐ. ರುಕ್ಮ ನಾಯ್ಕ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Join Whatsapp
Exit mobile version