Home ಟಾಪ್ ಸುದ್ದಿಗಳು ಮಡಿಕೇರಿ: ಕಾರುಗುಂದದಲ್ಲಿ ಚಿರತೆ ದಾಳಿಗೆ 2 ಬಲಿ

ಮಡಿಕೇರಿ: ಕಾರುಗುಂದದಲ್ಲಿ ಚಿರತೆ ದಾಳಿಗೆ 2 ಬಲಿ

ಕೊಡಗು: ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ರಾತ್ರಿ ಗ್ರಾಮದ ಪಾಣತ್ತಲೆ ಪಾಪಯ್ಯನವರು  ಮಲಗಿದ್ದ ವೇಳೆ ತಡರಾತ್ರಿ 1 ಗಂಟೆಯ ಸುಮಾರಿಗೆ ಮನೆಯ ಎದುರಿಗೆ ಕಟ್ಟಿಹಾಕಿದ್ದ  2 ನಾಯಿಗಳು  ವಿಚಿತ್ರವಾಗಿ ಚೀರಾಡಲು ಪ್ರಾರಂಭಿಸಿದೆ. ಕಿಟಕಿಯ ಮೂಲಕ ನೋಡಿದಾಗ  , ಚಿರತೆಯೊಂದು ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಒಂದು ನಾಯಿಯ ಮೆದುಳು ಹೊರಬಂದಿದ್ದು ಸ್ಥಳದಲ್ಲಿಯೇ ಸಾವನಪ್ಪಿದೆ. ಇನ್ನೊಂದು ನಾಯಿಯ  ಬಾಯಿಗೆ ಕಚ್ಚಿದ್ದು 1 ದಿನದ ಬಳಿಕ ಸಾವನ್ನಪ್ಪಿದೆ.

ಸಾಂದರ್ಭಿಕ ಚಿತ್ರ

ಕಳೆದ ವರ್ಷವೂ ಕೂಡ ಮಳೆಗಾಲದ ಸಮಯದಲ್ಲಿ ಚಿರತೆಯೊಂದು ತಮ್ಮ ಮನೆಯ ಬಳಿ ಓಡಾಡಿರುವ  ಸನ್ನಿವೇಶ ವನ್ನು  ಅದೇ ಗ್ರಾಮದ ಬೈಚನ ಕುಟುಂಬದ ಹಿರಿಯರೊಬ್ಬರು ನೆನಪಿಸಿದರು.

ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ , ಯಾವೊಬ್ಬ ಅಧಿಕಾರಿಯೂ 2 ದಿನದಿಂದಲೂ  ಭೆಟಿ ನೀಡಿಲ್ಲ. ತೋಟದ ಕಡೆ ಹೋಗಲು ಭಯಪಡುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version