Home ಟಾಪ್ ಸುದ್ದಿಗಳು ಮಡಿಕೇರಿ ನಗರ ಸಭೆ ಚುನಾವಣೆ; ಐದು ಸ್ಥಾನಗಳಲ್ಲಿ ಎಸ್ ಡಿಪಿಐ ಗೆಲುವು

ಮಡಿಕೇರಿ ನಗರ ಸಭೆ ಚುನಾವಣೆ; ಐದು ಸ್ಥಾನಗಳಲ್ಲಿ ಎಸ್ ಡಿಪಿಐ ಗೆಲುವು

►ನಗರಸಭೆಯಲ್ಲಿ SDPI ಪ್ರಮುಖ ವಿರೋಧ ಪಕ್ಷ

ಮಡಿಕೇರಿ; ಮಡಿಕೇರಿ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ಆದರೂ ನಗರ ಸಭೆಯ ಒಟ್ಟು 23 ಸ್ಥಾನಗಳ ಪೈಕಿ 16 ಸ್ಥಾನ ಗಳಿಸಿರುವ ಬಿಜೆಪಿ, ನಗರ ಸಭೆಯ ಅಧಿಕಾರವನ್ನು ತನ್ನ ಕೈವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ವಿರೋಧ ಪಕ್ಷವಾಗಿ ಎಸ್ ಡಿಪಿಐ ಕಾರ್ಯನಿರ್ವಹಿಸಲಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 8, ಕಾಂಗ್ರೆಸ್ 10, ಜೆಡಿಎಸ್ 1, ಎಸ್ ಡಿಪಿಐ 4 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಗೆ ಕೇವಲ 1 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ. ಎಸ್ ಡಿಪಿಐ ಒಟ್ಟು 9 ಸ್ಥಾನಗಳಲ್ಲಿ ಸ್ಪರ್ಧಿಸಿ 5 ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಜೆಡಿಎಸ್ ಒಂದು ಸ್ಥಾನ ಪಡೆದು ಯಥಾಸ್ಥಿತಿ ಕಾಪಾಡಿಕೊಂಡಿದೆ.

ಎಸ್ ಡಿಪಿಐನಿಂದ ವಾರ್ಡ್ ನಂ 3ರಲ್ಲಿ ಸ್ಪರ್ಧಿಸಿದ್ದ ಮೇರಿ ವೇಗಸ್, ವಾರ್ಡ್ ನಂ 1ರಲ್ಲಿ ಸ್ಪರ್ಧಿಸಿದ್ದ ಮನ್ಸೂರ್, ವಾರ್ಡ್ ನಂ 11ರಲ್ಲಿ ಸ್ಪರ್ಧಿಸಿದ್ದ ನಿಮಾ ಅರ್ಷದ್, ವಾರ್ಡ್ ನಂ. 12ರಲ್ಲಿ ಸ್ಪರ್ಧಿಸಿದ್ದ ಬಶೀರ್, ವಾರ್ಡ್ ನಂ 7ರಲ್ಲಿ ಸ್ಪರ್ಧಿಸಿದ್ದ ಅಮೀನ್ ಮುಹ್ಸಿನ್ ಜಯಗಳಿಸಿದ್ದಾರೆ.

Join Whatsapp
Exit mobile version