ಮಡಿಕೇರಿ: ಭಾರೀ ಮಳೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿಯುವ ಸಾಧ್ಯತೆ ಇರುವುದರಿಂದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ನಗರದ ತಿಮ್ಮಯ್ಯ ವೃತ್ತದ ಜಿಲ್ಲಾಧಿಕಾರಿ ಕಚೇರಿ ಕೆಳಭಾಗದಲ್ಲಿ ತಡೆಗೋಡೆ ಬಿರುಕು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಸ್ತೆ ಬದಿಯ ತಡೆಗೋಡೆ ಕುಸಿದದ್ದೇ ಆದಲ್ಲಿ ಹೆದ್ದಾರಿ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆ ತಡರಾತ್ರಿ ಅಧಿಕಾರಿಗಳ ಸಲಹೆ ಮೇಲೆ ದಿಢೀರ್ ಆಗಿ ಮಡಿಕೇರಿಯ ಟೋಲ್ ಗೇಟ್ ಬಳಿಯೇ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಮಡಿಕೇರಿ-ಮಂಗಳೂರಿಗೆ ತೆರಳುವವರು ಹಾಗೂ ಮಂಗಳೂರಿನಿಂದ ನಗರಕ್ಕೆ ಬರುವವರು ಮೇಕೆರಿ-ತಾಳತ್ತಮನೆ-ಅಪ್ಪಂಗಳ ಮಾರ್ಗವಾಗಿ ಬರುವಂತೆ ಸೂಚಿಸಲಾಗಿದೆ.