Home ಟಾಪ್ ಸುದ್ದಿಗಳು ಮಡಿಕೇರಿ | ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಸಭ್ಯ ವರ್ತನೆ: ಆರೋಪಿಯ ಬಂಧನ

ಮಡಿಕೇರಿ | ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಸಭ್ಯ ವರ್ತನೆ: ಆರೋಪಿಯ ಬಂಧನ

ಮಡಿಕೇರಿ: ಮೆಡಿಕಲ್ ಕಾಲೇಜು ಮಹಿಳಾ ಹಾಸ್ಟೆಲ್ ಬಳಿ ಅಸಭ್ಯ ವರ್ತನೆ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಸಿಜಿಲ್ (27) ಬಂಧಿತ ಅರೋಪಿಯಾಗಿದ್ದಾನೆ.


ಸಿಜಿಲ್ ಎಂಬಾತ ಕಳೆದ ಒಂದು ವಾರದಿಂದ ರಾತ್ರಿ ಸಮಯದಲ್ಲಿ ಮದ್ಯಪಾನ ಮಾಡಿಕೊಂಡು ಲೇಡಿಸ್ ಹಾಸ್ಟೆಲ್ ಬಳಿ ಹೋಗಿ ಅಸಭ್ಯ ವರ್ತನೆ ತೋರಿದ್ದಾನೆ. ಈತನ ವರ್ತನೆಗಳು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಸಿಸಿಟಿವಿಯ ಚಹರೆಗಳ ಆಧರಿಸಿ ಅರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೊಡಗು ಎಸ್ ಪಿ ರಾಮರಾಜನ್ ತಿಳಿಸಿದ್ದಾರೆ.
ಆರೋಪಿ ಬೆಳಗ್ಗೆ ತೋಟದ ಕೆಲಸಕ್ಕೆ ಹೋಗಿ ರಾತ್ರಿ ಸಮಯದಲ್ಲಿ ಮಡಿಕೇರಿಯಲ್ಲಿ ಖಾಸಗಿ ಆಟೋವನ್ನು ಬಾಡಿಗೆಗೆ ತೆಗೆದುಕೊಂಡು, ಆಟೋ ಓಡಿಸುವ ನೆಪದಲ್ಲಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ ರಾತ್ರಿಯೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

Join Whatsapp
Exit mobile version