Home ಟಾಪ್ ಸುದ್ದಿಗಳು ಮಧ್ಯಪ್ರದೇಶ: ಮತದಾನದ ವೇಳೆ ಘರ್ಷಣೆ, ಇಬ್ಬರಿಗೆ ಗಾಯ

ಮಧ್ಯಪ್ರದೇಶ: ಮತದಾನದ ವೇಳೆ ಘರ್ಷಣೆ, ಇಬ್ಬರಿಗೆ ಗಾಯ

ಭೋಪಾಲ್: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿನಿಧಿಸುವ ಮಧ್ಯಪ್ರದೇಶದ ದಿಮಾನಿ ಕ್ಷೇತ್ರದಲ್ಲಿ ಶುಕ್ರವಾರ ಮತದಾನದ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಅಜಯ್ ಶರ್ಮಾ ಮತ್ತು ರಾಮ ಪ್ರತಾಪ್ ಶರ್ಮಾ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳಿಗೆ ದೊಣ್ಣೆಗಳಿಂದ ಹೊಡೆದು ಗಾಯಗೊಳಿಸಲಾಗಿದೆ.
ಮತದಾರರು ಮತದಾನ ಮಾಡದಂತೆ ತಡೆಯುತ್ತಿದ್ದಕ್ಕೆ ಮಿರ್ಧಾನ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ವರದಿಯಾಗಿದೆ.

Join Whatsapp
Exit mobile version