ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಲ್ಲಿ 10 ಕಾಡಾನೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ.
ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಕ್ಷೇತ್ರ ನಿರ್ದೇಶಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳೆಗಳ ಮೇಲೆ ಸಿಂಪಡಿಸಿರುವ ಕೀಟನಾಶಕಗಳ ಮೇಲೆ ಅನುಮಾನ ಮೂಡಿತ್ತು, ಆದರೆ ಪ್ರಾಥಮಿಕ ಸಂಶೋಧನೆಗಳು ಬೆಳೆಗಳಿಗೆ ಕೀಟನಾಶಕ ಬಳಕೆಗೆ ಯಾವುದೇ ಪುರಾವೆಗಳನ್ನು ತೋರಿಸಿಲ್ಲ. 2-3 ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರದಂದು ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಎಕ್ಸ್‌ಗ್ರೇಷಿಯಾ ಪರಿಹಾರವನ್ನು ಹೆಚ್ಚಿಸಲಾಗಿದೆ. ಆನೆ ದಾಳಿಗೆ ಬಲಿಯಾದವರ ಪರಿಹಾರವನ್ನು 8 ಲಕ್ಷದಿಂದ 25 ಲಕ್ಷಕ್ಕೆ ಏರಿಸಲಾಗಿದೆ ಎಂದು ಮುಖ್ಯಮಂತ್ರಿ ಯಾದವ್ ಹೇಳಿದ್ದಾರೆ.