Home ಜಾಲತಾಣದಿಂದ ಮಧ್ಯಪ್ರದೇಶ ಬುರ್ಹಾನ್‌ಪುರದಲ್ಲೊಂದು ‘ತಾಜ್ ಮಹಲ್ ಮನೆ’ !

ಮಧ್ಯಪ್ರದೇಶ ಬುರ್ಹಾನ್‌ಪುರದಲ್ಲೊಂದು ‘ತಾಜ್ ಮಹಲ್ ಮನೆ’ !

ನವದೆಹಲಿ: ಆಗ್ರಾದಲ್ಲಿರವ ತಾಜ್ ಮಹಲ್ ಪ್ರೀತಿಯ ಸಂಕೇತ. ಭಾರತೀಯ, ಪರ್ಶಿಯನ್ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಅಪೂರ್ವ ಸಮ್ಮಿಲನಕ್ಕೆ ಮರುಳಾಗದವರೇ ಇಲ್ಲ. ಮೊಗಲ್ ದೊರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಪ್ರೀತಿಯ ಸಂಕೇತವಾಗಿ ನಿರ್ಮಿಸಿದ ಈ ಸ್ಮಾರಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು. ಆದರೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿರುವುದು ಮಧ್ಯಪ್ರದೇಶ ಬುರ್ಹಾನ್‌ಪುರದ ‘ತಾಜ್ ಮಹಲ್ ಮನೆ’ !

ಮಧ್ಯಪ್ರದೇಶ ಬುರ್ಹಾನ್‌ಪುರದ ಉದ್ಯಮಿ ಆನಂದ್ ಚೋಕ್ಸೆ, ತನ್ನ ಪ್ರಿಯ ಪತ್ನಿಗಾಗಿ ತಾಜ್ ಮಹಲ್ ಪ್ರತಿರೂಪದಂತೆ ಇರುವ ಮನೆಯೊಂದನ್ನು ಕಟ್ಟಿಸಿದ್ದಾರೆ. ಸದ್ಯಕ್ಕೆ ಈ ತಾಜ್ ಮಹಲ್ ಮನೆ ಫುಲ್ ಟ್ರೆಂಡಿಂಗ್’ನಲ್ಲಿದೆ.

ಆಗ್ರಾದ ತಾಜ್’ಮಹಲ್’ನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿದ್ದ ಆನಂದ್ ಚೋಕ್ಸೆ, ಮೂರು ವರ್ಷಗಳ ನಿರಂತರ ಪರಿಶ್ರಮದಿಂದ ತಮ್ಮ ಕನಸಿನ ಮನೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.

ಈ ಮನೆಯ ನಿರ್ಮಾಣ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಲಾಗಿತ್ತು ಎಂದು ಅದನ್ನು ನಿರ್ಮಿಸಿದ ಎಂಜಿನಿಯರ್ ಬಹಿರಂಗಪಡಿಸಿದ್ದಾರೆ. ಮನೆಯೊಳಗಿನ ಕೆತ್ತನೆ ಕೆಲಸಗಳಿಗಾಗಿ ಬಂಗಾಳ ಮತ್ತು ಇಂದೋರ್‌ನ ಕಲಾವಿದರನ್ನು ಕರೆಸಿಕೊಳ್ಳಲಾಗಿತ್ತು. ಬುರ್ಹಾನಪುರ್ ನಗರದಲ್ಲಿ ನಿರ್ಮಿಸಲಾಗಿರುವ ತಾಹ್ ಮಹಲ್ ಮನೆಯ ಗುಮ್ಮಟವು 29 ಅಡಿ ಎತ್ತರವಿದೆ. ಅಲ್ಲದೇ ತಾಜ್ ಮಹಲ್’ನಲ್ಲಿರುವ ರೀತಿಯಲ್ಲೇ ಮನೆಯೂ ಗೋಪುರಗಳನ್ನು ಹೊಂದಿದೆ.

ಮನೆಯ ನೆಲಹಾಸು ರಾಜಸ್ಥಾನದ ‘ಮಕ್ರಾನಾ’ ಹಾಗೂ ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಮನೆಯ ಒಳಗಡೆ ವಿಶಾಲವಾದ ಹಾಲ್, ಕೆಳ ಅಂತಸ್ತಿನಲ್ಲಿ ಎರಡು ಮಲಗುವ ಕೋಣೆಗಳು, ಮೇಲಿನ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳು, ಗ್ರಂಥಾಲಯ ಮತ್ತು ಧ್ಯಾನ ಕೋಣೆಯನ್ನು ಹೊಂದಿದೆ. ವಿದ್ಯುತ್ ಬೆಳಕಿನಲ್ಲಿ ರಾತ್ರಿ ಸಮಯದಲ್ಲಿ ನಿಜವಾದ ತಾಜ್ ಮಹಲ್‌ನಂತೆ ಕಂಗೊಳಿಸುತ್ತಿದೆ.

Join Whatsapp
Exit mobile version