ಪ್ರಧಾನಿ ಮೋದಿಯ ನಾಲ್ಕು ಗಂಟೆಗಳ ಕಾರ್ಯಕ್ರಮಕ್ಕೆ ಮ.ಪ್ರದೇಶ ಸರಕಾರ ವ್ಯಯಿಸಲಿದೆ 23ಕೋಟಿ!

Prasthutha|

ಭೋಪಾಲ್: ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಭೋಪಾಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಪ್ರದೇಶದ ಬುಡಕಟ್ಟು ಜನರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಪ್ರಧಾನಿ ಮೋದಿ ಭೋಪಾಲ್ ನಲ್ಲಿ ನಾಲ್ಕು ಗಂಟೆಗಳ ಕಾಲ ಇರಲಿದ್ದು ಈ ಕಾರ್ಯಕ್ರಮಕ್ಕೆ ಮಧ್ಯಪ್ರದೇಶ ಸರಕಾರ 23 ಕೋಟಿ ರೂ. ಗೂ ಹೆಚ್ಚು ಮೊತ್ತವನ್ನು ವ್ಯಯಿಸಲಿದೆ ಎಂದು ವರದಿ ತಿಳಿಸಿದೆ.

- Advertisement -

ಪ್ರಧಾನಿಯ ಭೋಪಾಲ್ ಭೇಟಿಗಾಗಿ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ. 13 ಕೋಟಿ ರೂ. ಜಾಂಬೂರಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಸಾಗಿಸಲು ವೆಚ್ಚ ಮಾಡಲಾಗುತ್ತದೆ, 52 ಜಿಲ್ಲೆಗಳಿಂದ ಬರುವ ಜನರಿಗೆ ಸಾರಿಗೆ, ಆಹಾರ ಮತ್ತು ವಸತಿಗಾಗಿ 12 ಕೋಟಿ ರೂ. ಮತ್ತು ಟೆಂಟ್‌ಗಳು, ಅಲಂಕಾರ ಮತ್ತು ಪ್ರಚಾರಕ್ಕಾಗಿ ರೂ. 9 ಕೋಟಿಗೂ ಹೆಚ್ಚು ಹಣವನ್ನು ಸರಕಾರವು ವ್ಯಯಿಸಲಿದೆ.

ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಸ್ಮರಣಾರ್ಥವಾಗಿ ಮಧ್ಯಪ್ರದೇಶ ಸರಕಾರವು ಜಂಜಾಟಿಯ ಗೌರವ್ ದಿವಸ್ ಅನ್ನು ಆಚರಿಸಲಿದೆ. ಪ್ರಧಾನಿ ಮೋದಿ ಆ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಜಂಬೂರಿ ಮೈದಾನದಲ್ಲಿ ದೇಶದ ಮೊದಲ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

- Advertisement -

ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಲು ಜಂಜಾಟಿಯ ಗೌರವ್ ದಿವಸ್‌ನ ಅಂಗವಾಗಿ ನವೆಂಬರ್ 15 ರಿಂದ 22 ರವರೆಗೆ ರಾಷ್ಟ್ರೀಯವಾಗಿ ಒಂದು ವಾರದ ಕಾರ್ಯಕ್ರಮಗಳನ್ನು ಆಯೋಜಿಸಲು ಈಗಾಗಲೇ ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

Join Whatsapp