ಭೋಪಾಲ್: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮಧ್ಯಪ್ರದೇಶದ ಅಮರವಾಡ ಶಾಸಕ ಕಾಮೇಶ್ ಶಾ (51) ಅವರು ಕಾಂಗ್ರೆಸ್ ತೊರೆದು ಶುಕ್ರವಾರ ಬಿಜೆಪಿ ಸೇರಿದ್ದಾರೆ.
ಅಮರವಾಡ, ಕಾಂಗ್ರೆಸ್ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ‘ಭದ್ರಕೋಟೆ’ ಎನಿಸಿರುವ ಛಿಂದ್ವಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಶಾ ಅವರು ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ.
ಕಮಲನಾಥ್ ಅವರ ಕುಟುಂಬ ರಾಜಕಾರಣ ಮತ್ತು ಅಹಂಕಾರದ ವರ್ತನೆಯಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಹೇಳಿರುವ ಶಾ, ಇಡೀ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಪ್ರಭಾವ ಇದೆ ಎಂದಿದ್ದಾರೆ.