Home ಟಾಪ್ ಸುದ್ದಿಗಳು ಸಂಘಪರಿವಾರದ ರ‍್ಯಾಲಿಯಿಂದಾಗಿ ಕೋಮು ಗಲಭೆ| ಮುಸ್ಲಿಮ್ ಯುವಕರನ್ನೇ ಬಂಧಿಸಿದ ಪೊಲೀಸರು!

ಸಂಘಪರಿವಾರದ ರ‍್ಯಾಲಿಯಿಂದಾಗಿ ಕೋಮು ಗಲಭೆ| ಮುಸ್ಲಿಮ್ ಯುವಕರನ್ನೇ ಬಂಧಿಸಿದ ಪೊಲೀಸರು!

ಭೋಪಾಲ್: ಸಂಘಪರಿವಾರ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮನವಾರ್ ತೆಹಸಿಲ್‌ನಲ್ಲಿ ‘ಶೌರ್ಯ ಯಾತ್ರೆ’ ನಡೆಸಿದ್ದು, ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಕ್ಕೆ ನುಗ್ಗಿ ಕೋಮು ಗಲಭೆಗೆ ಕಾರಣವಾಗಿತ್ತು. ಆದರೆ ಪೊಲೀಸರು ಮುಸ್ಲಿಮ್ ಯುವಕರನ್ನು ಮಾತ್ರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ನುಗ್ಗಿದ ಸಂಘಪರಿವಾರದ ಗುಂಪು ದಾಂಧಲೆ ನಡೆಸಿ ಕೋಮುಗಲಭೆಗೆ ಕಾರಣವಾಗಿತ್ತು. ಪೊಲೀಸರ ಸೂಚನೆಯನ್ನೂ ಕಡೆಗಣಿಸಿದ ಗುಂಪು ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ಅವಹೇಳನಕಾರಿ ಘೋಷಣೆಗಳನ್ನು ಕೂಗುತ್ತಾ ಪ್ರವೇಶಿಸಿದ್ದು ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.

ಸಂಘಪರಿವಾರದ DJ ಹಾಡುಗಳೊಂದಿಗೆ ಬೃಹತ್ ‘ಶೌರ್ಯ ಯಾತ್ರೆ’ಯನ್ನು ನಡೆಸಿ ದಾಂಧಲೆ ನಡೆಸಿತ್ತು.
ಗಲಭೆ, ಕೊಲೆ ಯತ್ನ, ಅಪಹರಣ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮನವಾರ ಪೊಲೀಸ್ ಠಾಣಾ ಪೊಲೀಸರು ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪೊಲೀಸರು ಹನ್ನೆರಡು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರೆಲ್ಲರೂ ಮುಸ್ಲಿಮರಾಗಿದ್ದಾರೆ.

2016ರಲ್ಲೂ ವಿಶ್ವ ಹಿಂದೂ ಪರಿಷತ್‌ನ ‘ಶೌರ್ಯ ಯಾತ್ರೆ’ಯ ಸಂದರ್ಭದಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಹಿಂಸಾಚಾರದ ಸಮಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಹತ್ತಾರು ಅಂಗಡಿಗಳನ್ನು ಸುಟ್ಟು ಹಾಕಲಾಗಿತ್ತು.

Join Whatsapp
Exit mobile version