ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು ಬಿಟ್ಟು ಟ್ರೋಲ್‌ಗೆ ಒಳಗಾದ ಮಧ್ಯಪ್ರದೇಶ ಸಿಎಂ

Prasthutha|

ಭೋಪಾಲ್​: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿರುವ ಫೋಟೋ ವೈರಲಾಗಿದ್ದು, ಇದೀಗ ವಿಪರೀತ ಟ್ರೋಲ್‌ಗೆ ಒಳಗಾಗಿದ್ದಾರೆ.

- Advertisement -

​​ ಎರಡು ದೊಡ್ಡ ಮಾರ್ಬಲ್​ ಕಲ್ಲಿನ ಮೇಲೆ ನಿಂತ ಶಿವರಾಜ್​ ಸಿಂಗ್​ ಚೌಹಾಣ್ ಒಂದು ಗಿಡಕ್ಕೆ ನೀರು ಹಾಕುತ್ತಿದ್ದಾರೆ. ಅವರ ಪಕ್ಕದಲ್ಲಿ ನಿಂತ ವ್ಯಕ್ತಿ ಮಳೆಯಲ್ಲಿ ಅವರಿಗೆ ಛತ್ರಿ ಹಿಡಿದಿದ್ದಾರೆ.

ಗಿಡ ನೆಡಲು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಅಗತ್ಯವಿತ್ತಾ? ಮಳೆ ಬರುತ್ತಿರುವಾಗಲೂ ಗಿಡಕ್ಕೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.

- Advertisement -

ಈ ಫೋಟೋವನ್ನು ಟ್ವೀಟ್​ ಮಾಡಿದ ಮಧ್ಯಪ್ರದೇಶ ಕಾಂಗ್ರೆಸ್​ ನ ಮಾಧ್ಯಮ ಕೋ ಆರ್ಡಿನೇಟರ್​ ನರೇಂದ್ರ ಸಲುಜಾ, ಇಲ್ಲಿ ಕೆಂಪು ಮಣ್ಣಿನ ವಿಹಂಗಮ ನೋಟವಿದೆ. ಆ ಒದ್ದೆ ಮಣ್ಣಿನ ಮೇಲೆ ರೈತನ ಮಗ ಶಿವರಾಜ್​ ಜೀ ಅವರು ದುಬಾರಿ ಕಲ್ಲುಗಳನ್ನು ಹಾಕಿ ಕೊಡೆ ಹಿಡಿದು ಸಸಿಗೆ ನೀರು ಹಾಕುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.



Join Whatsapp