Home ಟಾಪ್ ಸುದ್ದಿಗಳು ಬಿಜೆಪಿ ನಾಯಕಿ ಮೇಲೆ ಅತ್ಯಾಚಾರ, ಹಣ ಸುಲಿಗೆ ಪ್ರಕರಣ: ಪಕ್ಷದ ಮುಖಂಡನ ಬಂಧನ

ಬಿಜೆಪಿ ನಾಯಕಿ ಮೇಲೆ ಅತ್ಯಾಚಾರ, ಹಣ ಸುಲಿಗೆ ಪ್ರಕರಣ: ಪಕ್ಷದ ಮುಖಂಡನ ಬಂಧನ

ಭೋಪಾಲ್: ಮಹಿಳಾ ಬಿಜೆಪಿ ನಾಯಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಕ್ಷದ ಮುಖಂಡರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಬಂಧಿತ ಆರೋಪಿಯನ್ನು ಅಜಿತ್ ಪಾಲ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಜತೆಗೆ, ಅಶ್ಲೀಲ ವಿಡಿಯೊ ತೋರಿಸಿ ಹಣ ನೀಡುವಂತೆಯೂ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಬಿಜೆಪಿ ನಾಯಕಿಯೂ ಆಗಿರುವ ಸಂತ್ರಸ್ತೆಯ ಮೇಲೆ ಪಕ್ಷದ ಟಿಕೆಟ್ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಲಾಗಿದೆ. ಆರೋಪಿ ಘಟನೆಯನ್ನು ವಿಡಿಯೊ ಚಿತ್ರೀಕರಿಸಿಕೊಂಡು ಹಣ ನೀಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.


ಚೌಹಾಣ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 64 (1) (ಅತ್ಯಾಚಾರ), 308 (5) (ಸುಲಿಗೆ), 296 (ಅಶ್ಲೀಲ ಕೃತ್ಯ) ಮತ್ತು 351 (3) (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version