Home ಟಾಪ್ ಸುದ್ದಿಗಳು ಮಂಜೇಶ್ವರ | ಮದರಸಾ ವಿದ್ಯಾರ್ಥಿನಿಯನ್ನು ಮೇಲಕ್ಕೆತ್ತಿ ನೆಲಕ್ಕೆ ಬಿಸಾಡಿ ಕ್ರೂರತೆ ಮೆರೆದ ಯುವಕ: ಪೊಲೀಸ್ ವಶಕ್ಕೆ

ಮಂಜೇಶ್ವರ | ಮದರಸಾ ವಿದ್ಯಾರ್ಥಿನಿಯನ್ನು ಮೇಲಕ್ಕೆತ್ತಿ ನೆಲಕ್ಕೆ ಬಿಸಾಡಿ ಕ್ರೂರತೆ ಮೆರೆದ ಯುವಕ: ಪೊಲೀಸ್ ವಶಕ್ಕೆ

ಮಂಜೇಶ್ವರ: ಮದರಸಾಗೆ ತೆರಳಿದ್ದ 9 ವರ್ಷ ಪ್ರಾಯದ ವಿದ್ಯಾರ್ಥಿನಿಯನ್ನು ವ್ಯಕ್ತಿಯೋರ್ವ ಮದ್ರಸಾ ಆವರಣದಲ್ಲೇ ಕೈಯಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸುವಂತೆ ಎಸೆದ ಅಮಾನವೀಯ ಘಟನೆ ಮಂಜೇಶ್ವರದಲ್ಲಿ ನಡೆದಿದ್ದು, ಇದರ ವೀಡಿಯೋ ಎಲ್ಲೆಡೆ ಹರಿದಾಡಿದ್ದು, ಜನ ಬೆಚ್ಚಿಬಿದ್ದಿದ್ದಾರೆ.


ವಿದ್ಯಾರ್ಥಿನಿ ಲಿಯಾ ಫಾತಿಮಾ (9) ಗಾಯಗೊಂಡಿದ್ದು, ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.


ಕೃತ್ಯವೆಸೆಗಿದವನನ್ನು ಉದ್ಯಾವರ ನಿವಾಸಿ ಸಿದ್ದೀಖ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.


ವೀಡಿಯೋದಲ್ಲಿ, ಗುರುವಾರ ವಿದ್ಯಾರ್ಥಿನಿ ಮದರಸಾಕ್ಕೆ ತೆರಳಿ ಹೊರ ಬರುತ್ತಿದ್ದಂತೆಯೇ ಮದರಸಾ ಅವರಣದ ಹೊರಗೆ ನಿಂತಿದ್ದ ಆರೋಪಿ ನೇರವಾಗಿ ಬಂದು ಏಕಾಏಕಿ ಬಾಲಕಿಯನ್ನು ಎರಡೂ ಕೈಯಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಈ ಕ್ರೂರ ಯುವಕ ಇದಕ್ಕಿಂತ ಮೊದಲು ಇದೇ ಪರಿಸರದಲ್ಲಿ ಹಲವು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ದೂರಿದ್ದಾರೆ.

Join Whatsapp
Exit mobile version