ಮಂಜೇಶ್ವರ | ಮದರಸಾ ವಿದ್ಯಾರ್ಥಿನಿಯನ್ನು ಮೇಲಕ್ಕೆತ್ತಿ ನೆಲಕ್ಕೆ ಬಿಸಾಡಿ ಕ್ರೂರತೆ ಮೆರೆದ ಯುವಕ: ಪೊಲೀಸ್ ವಶಕ್ಕೆ

Prasthutha|

ಮಂಜೇಶ್ವರ: ಮದರಸಾಗೆ ತೆರಳಿದ್ದ 9 ವರ್ಷ ಪ್ರಾಯದ ವಿದ್ಯಾರ್ಥಿನಿಯನ್ನು ವ್ಯಕ್ತಿಯೋರ್ವ ಮದ್ರಸಾ ಆವರಣದಲ್ಲೇ ಕೈಯಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸುವಂತೆ ಎಸೆದ ಅಮಾನವೀಯ ಘಟನೆ ಮಂಜೇಶ್ವರದಲ್ಲಿ ನಡೆದಿದ್ದು, ಇದರ ವೀಡಿಯೋ ಎಲ್ಲೆಡೆ ಹರಿದಾಡಿದ್ದು, ಜನ ಬೆಚ್ಚಿಬಿದ್ದಿದ್ದಾರೆ.

- Advertisement -


ವಿದ್ಯಾರ್ಥಿನಿ ಲಿಯಾ ಫಾತಿಮಾ (9) ಗಾಯಗೊಂಡಿದ್ದು, ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.


ಕೃತ್ಯವೆಸೆಗಿದವನನ್ನು ಉದ್ಯಾವರ ನಿವಾಸಿ ಸಿದ್ದೀಖ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.


ವೀಡಿಯೋದಲ್ಲಿ, ಗುರುವಾರ ವಿದ್ಯಾರ್ಥಿನಿ ಮದರಸಾಕ್ಕೆ ತೆರಳಿ ಹೊರ ಬರುತ್ತಿದ್ದಂತೆಯೇ ಮದರಸಾ ಅವರಣದ ಹೊರಗೆ ನಿಂತಿದ್ದ ಆರೋಪಿ ನೇರವಾಗಿ ಬಂದು ಏಕಾಏಕಿ ಬಾಲಕಿಯನ್ನು ಎರಡೂ ಕೈಯಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಈ ಕ್ರೂರ ಯುವಕ ಇದಕ್ಕಿಂತ ಮೊದಲು ಇದೇ ಪರಿಸರದಲ್ಲಿ ಹಲವು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ದೂರಿದ್ದಾರೆ.



Join Whatsapp