ಚಿಕ್ಕಮಗಳೂರು: ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ.
ಒಂಟಿ ಸಲಗಕ್ಕಾಗಿ 6 ದಿನದಿಂದ ಕಾರ್ಯಾಚರಣೆ ನಡೆಸುತ್ತಿದ್ದ 40ಕ್ಕೂ ಹೆಚ್ಚು ಸಿಬ್ಬಂದಿ ಐದು ಸಾಕಾನೆಗಳನ್ನು ತಂದು ಕಾರ್ಯಚರಣೆ ತಮ್ಮ ಖೆಡ್ಡಾಕೆ ಬೀಳಿಸಿದ್ದಾರೆ.
ಹಗಲಲ್ಲಿ ದಾಂಧಲೆ ನಡೆಸಿ ಸಂಜೆ ಪ್ರಪಾತದ ಸ್ಥಳಕ್ಕೆ ಹೋಗುತ್ತಿದ್ದ ಸಲಗ ಹಾವೇರಿ ಟಸ್ಕರ್ ನನ್ನು ಮೋಹಿನಿ ಎಂಬ ಹೆಣ್ಣಾನೆಯ ಪ್ರೇಮಪಾಶಕ್ಕೆ ಸಿಲುಕಿಸಿ ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಸಲಗನ ಸೆರೆಯಿಂದ ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ.