Home ಟಾಪ್ ಸುದ್ದಿಗಳು ಮಾ. 21ರೊಳಗೆ ಚುನಾವಣಾ ಬಾಂಡ್ ಗಳ ಸಂಪೂರ್ಣ ವಿವರ ಕೊಡಿ: SBIಗೆ ಸುಪ್ರೀಂ ನಿರ್ದೇಶನ

ಮಾ. 21ರೊಳಗೆ ಚುನಾವಣಾ ಬಾಂಡ್ ಗಳ ಸಂಪೂರ್ಣ ವಿವರ ಕೊಡಿ: SBIಗೆ ಸುಪ್ರೀಂ ನಿರ್ದೇಶನ

ನವದೆಹಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಇದೇ ತಿಂಗಳು ಮಾರ್ಚ್ 21ರೊಳಗೆ ಬಿಡುಗಡೆ ಮಾಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್ಬಿಐ) ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.


ಬಾಂಡ್ ಗಳಿಗೆ ಸಂಬಂಧಿಸಿದ ವಿವರವನ್ನು ಬಿಡುಗಡೆಗೊಳಿಸಬೇಕೆಂಬ ಅಗತ್ಯತೆಯಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಸೋಮವಾರ ಹೇಳಿದೆ.


ಯೂನಿಕ್ ಬಾಂಡ್ ನಂಬರ್ ಗಳನ್ನೂ ಒಳಗೊಂಡಂತೆ ಎಲ್ಲ ವಿವರಗಳನ್ನು ಎಸ್ ಬಿಐ ಅಧ್ಯಕ್ಷ ಮಾರ್ಚ್ 21 ಸಂಜೆ 5ರೊಳಗೆ ಅಫಿಡಿವಿಟ್ ಮೂಲಕ ಕೋರ್ಟ್ ಗೆ ಸಲ್ಲಿಸಬೇಕು ಎಂದು ತಿಳಿಸಿದೆ.

Join Whatsapp
Exit mobile version