Home ಟಾಪ್ ಸುದ್ದಿಗಳು 100 ಕ್ಕೂ ಅಧಿಕ ಹಿಟ್​ ಚಿತ್ರಗಳಿಗೆ ಹಾಡು ಬರೆದಿದ್ದ ಸಾಹಿತಿ ದೇವ್​ ಕೊಹ್ಲಿ ನಿಧನ

100 ಕ್ಕೂ ಅಧಿಕ ಹಿಟ್​ ಚಿತ್ರಗಳಿಗೆ ಹಾಡು ಬರೆದಿದ್ದ ಸಾಹಿತಿ ದೇವ್​ ಕೊಹ್ಲಿ ನಿಧನ

ನವದೆಹಲಿ: ಹಿರಿಯ ಸಾಹಿತಿ ದೇವ್​ ಕೊಹ್ಲಿ ಇಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು.

ಮುಂಬೈನ ಲೋಖಂಡವಾಲಾ ಕಾಂಪ್ಲೆಕ್ಸ್​ ನಲ್ಲಿರುವ ಜುಪಿಟರ್​ ಅಪಾರ್ಟ್​ ಮೆಂಟ್​ ನ 4ನೇ ಕ್ರಾಸ್​ ನಲ್ಲಿರುವ ದೇವ್​ ನಿವಾಸದಲ್ಲಿ​ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ಸಾಹಿತಿ ದೇವ್​ ಕೊಹ್ಲಿ ಅವರು 100 ಕ್ಕೂ ಅಧಿಕ ಸೂಪರ್​ ಹಿಟ್​ ಸಿನಿಮಾಗಳಿಗೆ ಹಾಡನ್ನು ಬರೆದಿದ್ದಾರೆ. ಮೈನೆ ಪ್ಯಾರ್​ ಕಿಯಾ, ಬಾಜಿಗರ್​, ಜುಡ್ವಾ 2, ಮುಸಾಫಿರ್​, ಶೂಟ್​ ಔಟ್​ ಅಲ್​ ಲೋಖಂಡವಾಲಾ, ಟ್ಯಾಕ್ಸಿ ನಂಬರ್​ 9-2-11ನಂತಹ ಅದ್ಭುತ ಚಿತ್ರಗಳ ಹಾಡಿಗೆ ಇವರು ಸಾಹಿತ್ಯ ಬರೆದಿದ್ದಾರೆ. ಅನು ಮಲಿಕ್​, ರಾಮ್​ ಲಕ್ಷ್ಮಣ್​, ಆನಂದ್​ ರಾಜ್​ ಆನಂದ್​, ಆನಂದ್​ ಮಿಲಿಂದ್​ ಸೇರಿದಂತೆ ಇನ್ನೂ ಅನೇಕ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ್ದಾರೆ.

Join Whatsapp
Exit mobile version