ವಿವಾಹ ವಾರ್ಷಿಕೋತ್ಸವಕ್ಕೆ ಸ್ಪೆಶಲ್ ಗಿಫ್ಟ್! : ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಪತ್ನಿಗೆ ಉಡುಗೊರೆ ನೀಡಿದ ಪತಿ

Prasthutha|

ಅಜ್ಮೀರ್ : ಸಾಮಾನ್ಯವಾಗಿ ವಿವಾಹ ವಾರ್ಷಿಕೋತ್ಸವಗಳ ಸಂದರ್ಭ ಹೆಂಡತಿಗೆ ಗಂಡ ಚಿನ್ನದ ಆಭರಣ, ವಾಹನ ಗಿಫ್ಟ್ ನೀಡುವುದಿದೆ. ಅದನ್ನು ನೀಡಲೂ ಪರದಾಡುವವರೇ ಹೆಚ್ಚು. ಅಂತಹುದರಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿಸಲು ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಉಡುಗೊರೆ ನೀಡಿರುವ ಬಗ್ಗೆ ವರದಿಯಾಗಿದೆ.

- Advertisement -

ರಾಜಸ್ಥಾನದ ಅಜ್ಮೇರ್ ನಲ್ಲಿ ಇದು ನಡೆದಿದೆ. ಧರ್ಮೇಂದ್ರ ಅನಿಜಾ ಎಂಬವರು ತಮ್ಮ ಪತ್ನಿ ಸಪ್ನಾ ಅನಿಜಾ ಅವರಿಗೆ ಈ ಗಿಫ್ಟ್ ನೀಡಿದ್ದಾರೆ. ಲೂನಾರ್ ಸೊಸೈಟಿ ಇಂಟರ್ ನ್ಯಾಶನಲ್ ಮೂಲಕ ಚಂದ್ರನ ಮೇಲೆ ಅವರು ಭೂಮಿ ಖರೀದಿಸಿದ್ದಾರೆ.

“ಡಿ.24ರಂದು ನಮ್ಮ ವಿವಾಹ ವಾರ್ಷಿಕೋತ್ಸವವಿತ್ತು. ನಾನು ಅವಳಿಗೆ ವಿಶೇಷವಾದುದು ಏನಾದರೂ ಕೊಡಬೇಕು ಎಂದಿದ್ದೆ. ಪ್ರತಿಯೊಬ್ಬರೂ ಕಾರು, ಆಭರಣ, ಆಸ್ತಿಯನ್ನು ನೀಡುತ್ತಾರೆ. ಆದರೆ, ನಾನು ಬೇರೇನಾದರೂ ಮಾಡಲು ಬಯಸಿದ್ದೆ. ಹೀಗಾಗಿ ಚಂದ್ರನ ಮೇಲೆ ಭೂಮಿ ಖರೀದಿಸಿದೆ” ಎಂದು ಧರ್ಮೇಂದ್ರ ಅನಿಜಾ ಹೇಳಿದ್ದಾರೆ.

- Advertisement -

ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷ ಬೇಕಾಯಿತು. ಚಂದ್ರನ ಮೇಲೆ ಭೂಮಿ ಖರೀದಿಸಿದ ರಾಜಸ್ಥಾನದ ಮೊದಲ ವ್ಯಕ್ತಿ ನಾನೇ ಆಗಿದ್ದೇನೆ ಎಂದು ಅಂದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ವಿಶೇಷ ಉಡುಗೊರೆ ಸ್ವೀಕರಿಸಿದ ಸಪ್ನಾ ತುಂಬಾ ಖುಷಿಯಾಗಿದ್ದಾರೆ. ಪ್ರಪಂಚದ ಹೊರಗಿನ ಉಡುಗೊರೆಯನ್ನು ಸ್ವೀಕರಿಸುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

Join Whatsapp