ತಿರುವನಂತಪುರ: ಲುಲು ಅಂತಾರಾಷ್ಟ್ರೀಯ ಶಾಪಿಂಗ್ ಮಾಲ್ ನಂತಹ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ವಿಧಿಸುವುದು ಮೇಲ್ನೋಟಕ್ಕೇ ಅಕ್ರಮವಾಗಿದೆ ಎಂದು ಶುಕ್ರವಾರ ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇರಳದ ಎರ್ನಾಕುಲಂನ ಲುಲು ಇಂಟರ್ ನ್ಯಾಷನಲ್ ಶಾಪಿಂಗ್ ಮಾಲ್ ಪಾರ್ಕಿಂಗ್ ಶುಲ್ಕ ವಿಧಿಸಿದ್ದರ ವಿರುದ್ಧ ಅರ್ಜಿದಾರ ಪೌಲಿ ವಡಕ್ಕನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ. ಪಿ ವಿ ಕುನ್ಹಿಕೃಷ್ಣನ್ ನೇತೃತ್ವದ ಪೀಠ ನಡೆಸಿತು.
ಕೇರಳ ಮುನಿಸಿಪಾಲಿಟಿ ಕಟ್ಟಡ ನಿಯಮಾವಳಿ – 1994ರ ಅನ್ವಯ ಪಾರ್ಕಿಂಗ್ ಜಾಗವನ್ನು ನೀಡುವುದು ಕಡ್ಡಾಯವಾಗಿದ್ದು ಅಂತಹ ಕಡೆ ಪಾರ್ಕಿಂಗ್ ಶುಲ್ಕ ನೀಡುವುದು ಮೇಲ್ನೋಟಕ್ಕೆ ಅಕ್ರಮ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಇದೇ ವೇಳೆ, ನಾಳೆ ದಿನ ನೀವು ಲಿಫ್ಟ್ ಬಳಕೆಗೂ ಸೇವೆಯನ್ನು ಒದಗಿಸುತ್ತಿರುವ ಕಾರಣ ನೀಡಿ ಶುಲ್ಕ ಪಡೆಯುತ್ತೀರಾ? ಎಂದು ನ್ಯಾಯಾಲಯವು ಪ್ರತಿವಾದಿಗಳನ್ನು ಪ್ರಶ್ನಿಸಿತು.
(ಕೃಪೆ: ಬಾರ್ & ಬೆಂಚ್)