Home ಕ್ರೀಡೆ ಮುಂಬೈ ಇಂಡಿಯನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್‌ಗೆ ಜಯ

ಮುಂಬೈ ಇಂಡಿಯನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್‌ಗೆ ಜಯ

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 144 ರನ್ ಮಾತ್ರ ಗಳಿಸಿತ್ತು.

ಗುರಿ ಬೆನ್ನಟ್ಟಿದ್ದ ಲಖನೌ ತಂಡಕ್ಕೆ ಜಯ ಸುಲಭದ್ದಾಗಿರಲಿಲ್ಲ. 19.2 ಓವರ್ ತನಕ ಆಟ ಮುಂದುವರೆದು 6 ವಿಕೆಟ್‌ನಷ್ಟಕ್ಕೆ 145 ರನ್‌ ಗಳಿಸಿ ಜಯ ಸಾಧಿಸಿತು

ಮುಂಬೈ ಪರ ನೆಹಾಲ್ ವಧೇರಾ ಗರಿಷ್ಠ (46 ರನ್) ಗಳಿಸಿದರರೆ, ಇಶಾನ್ ಕಿಶನ್ (32) ಹಾಗೂ ಟಿಮ್ ಡೇವಿಡ್ (35 ನಾಟೌಟ್) ರನ್ ಗಳಿಸಿದರು.

ರೋಹಿತ್ ಶರ್ಮಾ (4), ಸೂರ್ಯಕುಮಾರ್ ಯಾದವ್ (10), ತಿಲಕ್ ವರ್ಮಾ (7) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (0) ವೈಫಲ್ಯ ಅನುಭವಿಸಿದರು.

ಲಖನೌ ಪರ ನಿಖರ ದಾಳಿ ಸಂಘಟಿಸಿದ ಮೊಹಸಿನ್ ಖಾನ್ ಎರಡು ಮತ್ತು ಮಾರ್ಕಸ್ ಸ್ಟೊಯಿನಿಸ್, ನವೀನ್ ಉಲ್ ಹಕ್, ಮಯಂಕ್ ಯಾದವ್ ಹಾಗೂ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಗಳಿಸಿದರು.

ಈ ನಿರ್ಣಾಯಕ ಗೆಲುವಿನ ಪರಿಣಾಮ ಲಖನೌ ಸೂಪರ್ ಜೈಂಟ್ಸ್ ತಂಡ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಮುಂಬೈ ತಂಡ 6 ಅಂಕಗಳನ್ನು ಹೊಂದಿದ್ದು 10 ನೇ ಸ್ಥಾನದಲ್ಲಿದೆ.

Join Whatsapp
Exit mobile version