ಅಚ್ಛೇ ದಿನ್!‌ : ಲಾಕ್‌ ಡೌನ್‌ ಸಂಕಷ್ಟದ ಸಮಯದಲ್ಲೂ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ!

Prasthutha: July 1, 2021

ನವದೆಹಲಿ : ಲಾಕ್‌ ಡೌನ್‌ ನಿಂದಾಗಿ ಕೆಲಸ ಕಳೆದುಕೊಂಡು ಮತ್ತು ಈಗಾಗಲೇ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟವನ್ನು ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಎಲ್‌ ಪಿಜಿ ಬೆಲೆ ಸಿಲಿಂಡರ್‌ ಗೆ 25.50 ರೂ. ಏರಿಕೆಯಾಗಿದೆ.

ಪ್ರಸ್ತುತ 14.2 ಕೆ.ಜಿ. ತೂಕದ ಗೃಹ ಬಳಕೆ ಸಿಲಿಂಡರ್‌ ಗಳಿಗೆ ದೆಹಲಿಯಲ್ಲಿ 834.50 ರೂ. ಇದೆ. 19 ಕೆಜಿ ಸಿಲಿಂಡರ್‌ ಬೆಲೆ ಕೂಡ 76 ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ 1550 ರೂ. ಆಗಿದೆ. ದೇಶದಲ್ಲಿ ಪ್ರತಿ ತಿಂಗಳ ಆರಂಭದಲ್ಲಿ ಸಿಲಿಂಡರ್‌ ಬೆಲೆ ನಿಗದಿ ಪಡಿಸಲಾಗುತ್ತದೆ.

ಮುಂಬೈನಲ್ಲಿ 14.2 ಕೆಜಿ ಸಿಲಿಂಡರ್‌ಗೆ 834.50 ರೂ. ಕೋಲ್ಕತ್ತಾದಲ್ಲಿ 861 ರೂ. ಚೆನ್ನೈನಲ್ಲಿ 850.50 ರೂ. ಲಕ್ನೋದಲ್ಲಿ ಸಿಲಿಂಡರ್ ಬೆಲೆ 872.50 ರೂ. ಅಹಮದಾಬಾದ್‌ನಲ್ಲಿ 841.50 ಆಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ