ವಿಜಯನಗರ: ಪ್ರೇಯಸಿಯೊಂದಿಗೆ ಮದುವೆ ಆಗಲು ಆಗಲಿಲ್ಲ ಎಂಬ ಕಾರಣಕ್ಕೆ ವಿಕೃತ ಪ್ರೇಮಿ ಆಕೆಯನ್ನು ಕೊಲೆ ಮಾಡಿ, ಅವಳ ರುಂಡ ಹಿಡಿದುಕೊಂಡು ಪೊಲೀಸ್ ಸ್ಟೇಷನ್ ಗೆ ಬಂದಿದ್ದು, ಹತ್ಯೆಗೀಡಾದವಳ ಅಣ್ಣ ಕೊಲೆಗಾರನನ್ನು ತನಗೊಪ್ಪಿಸಿ ಎಂದು ಠಾಣೆಯ ಮುಂದೆ ಆರ್ಭಟಿಸಿದ್ದಾನೆ.
ಭೋಜರಾಜ ಎನ್ನುವ ವಿಕೃತ ಪ್ರೇಮಿ, ತಾನು ಪ್ರೀತಿಸುತ್ತಿದ್ದ ನಿರ್ಮಲಾ (23) ಎಂಬಾಕೆಯನ್ನು ಮದುವೆಯಾಗಲು ಆಗಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಈ ಕೊಲೆ ನಡೆದಿತ್ತು.
ಆಕೆಯನ್ನು ಮದುವೆಯಾಗಲು ಅವಳ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಎರಡು ತಿಂಗಳ ಹಿಂದೆ ಈತ ಬೇರೊಬ್ಬಳನ್ನು ಮದುವೆಯಾಗಿದ್ದ. ಆದರೆ ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಈತ, ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದರಿಂದ ಗುರುವಾರ ಆಕೆಯ ಕೊಲೆ ಮಾಡಿ ರುಂಡ ಖಾನಾಹೊಸಹಳ್ಳಿ ಪೊಲೀಸ್ ಠಾಣೆಗೆ ಹಿಡಿದುಕೊಂಡು ಬಂದಿದ್ದ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ನಿರ್ಮಲಾ ಕುಟುಂಬಸ್ಥರು, ಹಾಗೂ ಆಕೆಯ ಅಣ್ಣ ಶ್ರೀಕಾಂತ್ಆರೋಪಿಯನ್ನು ತಮಗೆ ಒಪ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.