Home ಟಾಪ್ ಸುದ್ದಿಗಳು ಪ್ರೇಯಸಿಯನ್ನು ಕೊಂದು ತುಂಡು ಮಾಡಿ ಎಸೆದು ಸಿಕ್ಕಿಬಿದ್ದ ಪ್ರಿಯಕರ

ಪ್ರೇಯಸಿಯನ್ನು ಕೊಂದು ತುಂಡು ಮಾಡಿ ಎಸೆದು ಸಿಕ್ಕಿಬಿದ್ದ ಪ್ರಿಯಕರ

ಮುಂಬೈ: ಪ್ರೇಯಸಿಯನ್ನು ಕೊಲೆಗೈದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನವದೆಹಲಿಯ ತುಂಬೆಲ್ಲಾ ಎಸೆದ ಖತರ್ನಾಕ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ ಕೊಲೆಯಾದ ಯುವತಿಯಾಗಿದ್ದು, ಅಫ್ತಾಬ್ ಅಮೀನ್ ಪೂನಾವಾಲಾ ಪ್ರಕರಣದ ಆರೋಪಿಯಾಗಿದ್ದಾನೆ.

ಕೊಲೆಯಾದ ಶ್ರದ್ಧಾ(26) ಅಫ್ತಾಬ್ ನನ್ನು ಪ್ರೀತಿಸುತ್ತಿದ್ದು ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಈ ವಿಚಾರ ಯುವತಿಯ ಮನೆಯವರಿಗೆ ತಿಳಿದು ಪ್ರೀತಿಗೆ ನಿರಾಕರಿಸಿದ್ದಾರೆ, ಇದರಿಂದ ಮನನೊಂದ ಇಬ್ಬರು ಮುಂಬೈಯಿಂದ ದೆಹಲಿಗೆ ಓಡಿಹೋಗಿ ಅಲ್ಲಿ ಜೀವನ ಆರಂಭಿಸಿದ್ದರು. ಅಲ್ಲಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ಇತ್ತ ಪ್ರೀತಿಗೆ ನಿರಾಕರಿಸಿದ ಪೋಷಕರ ಕರೆಗಳನ್ನು ಯುವತಿ ಸ್ವೀಕರಿಸಲು ನಿರಾಕರಿಸಿದ್ದಾಳೆ, ಇದರಿಂದ ಗಾಬರಿಗೊಂಡ ಯುವತಿಯ ಪೋಷಕರು ಮುಂಬೈ ಯಲ್ಲಿ ವಾಸಮಾಡುತ್ತಿದ್ದ ಯುವತಿಯ ಮನೆಗೆ ಬಂದಿದ್ದಾರೆ. ಆದರೆ ಅಲ್ಲಿ ಮನೆಗೆ ಬೀಗ ಹಾಕಲಾಗಿತ್ತು. ಗಾಬರಿಗೊಂಡ ಯುವತಿಯ ಪೋಷಕರು ಕೂಡಲೇ ತಮ್ಮ ಮಗಳನ್ನು ಅಫ್ತಾಬ್ ಅಪಹರಿಸಿದ್ದಾನೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.

ಅತ್ತ ಮುಂಬೈ ಪೊಲೀಸರು ಯುವತಿಯ ಹುಡುಕಾಟ ನಡೆಸಿದರೆ, ಇತ್ತ ಯುವತಿ ಮತ್ತು ಪ್ರಿಯಕರನ ನಡುವೆ ನಡೆಯುತ್ತಿದ್ದ ಜಗಳ ಅತಿರೇಕಕ್ಕೆ ತಿರುಗಿ ಕೋಪಗೊಂಡ ಅಫ್ತಾಬ್ ಶ್ರದ್ಧಾಳನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಫ್ರಿಡ್ಜ್ ನಲ್ಲಿಟ್ಟು, ಹದಿನೆಂಟು ದಿನಗಳಲ್ಲಿ ಪ್ರತಿದಿನ ರಾತ್ರಿ ಎರಡು ಗಂಟೆಯ ಸುಮಾರಿಗೆ ದೇಹದ ತುಂಡುಗಳನ್ನು ದೆಹಲಿಯ ವಿವಿಧ ಸ್ಥಳಗಳಲ್ಲಿ ಎಸೆದು ಬಂದಿದ್ದ.

ಮುಂಬೈ ಪೊಲೀಸರು ಪ್ರಕರಣ ಭೇದಿಸಲು ಹುಡುಕಾಟ ನಡೆಸಿ ಮೊಬೈಲ್ ನೆಟ್ ವರ್ಕ್ ಪರಿಶೀಲಿಸಿದಾಗ ದೆಹಲಿಯಲ್ಲಿರುವ ಮಾಹಿತಿ ಲಭ್ಯವಾಗಿದೆ. ಅದರಂತೆ ದೆಹಲಿಗೆ ಬಂದು ಪೂನಾವಾಲಾನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನು ಮಾಡಿದ ಕೃತ್ಯ ಬಾಯಿ ಬಿಟ್ಟಿದ್ದು ಆತನನ್ನು ಬಂಧಿಸಿ ಮುಂಬೈ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version