Home ಟಾಪ್ ಸುದ್ದಿಗಳು ಸಹಜೀವನ ನಡೆಸಿ ಮದುವೆಗೆ ಒಪ್ಪದ ಪ್ರಿಯಕರನ ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪ್ರೇಯಸಿ

ಸಹಜೀವನ ನಡೆಸಿ ಮದುವೆಗೆ ಒಪ್ಪದ ಪ್ರಿಯಕರನ ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪ್ರೇಯಸಿ


ನವದೆಹಲಿ: ವರ್ಷಗಳ ಕಾಲ ಸಹಜೀವನ ನಡೆಸಿ ಮದುವೆಯಾಗಲು ನಿರಾಕರಿಸಿದ ಪ್ರೇಮಿಯನ್ನು ಪ್ರಿಯತಮೆಯೊಬ್ಬಳು ಕತ್ತು ಕುಯ್ದು ಮೃತದೇಹವನ್ನು ಸೂಟ್ ಕೇಸ್ನಲ್ಲಿ ತುಂಬಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.


ನಗರದ ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ನಿಕೇತನ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಹಿಂದೂ ಸಮುದಾಯದ ಮಹಿಳೆ ಹಾಗೂ ಫಿರೋಝ್ ಎಂಬಾತ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದರು. ಕೆಲವು ದಿನಗಳ ಹಿಂದೆ ತನ್ನನ್ನು ಮದುವೆಯಾಗುವಂತೆ ಯುವತಿ ಆತನ ಮೇಲೆ ಒತ್ತಡ ಹಾಕಿದ್ದಾಳೆ. ಇದಕ್ಕೆ ಯುವಕ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಬ್ಲೇಡ್ನಿಂದ ಆತನ ಕತ್ತು ಸೀಳಿ, ಹತ್ಯೆ ಮಾಡಿದ್ದಾಳೆ.

ಮೃತದೇಹವನ್ನು ಹೊರಗಡೆ ಸಾಗಿಸಲು ದೊಡ್ಡ ಸೂಟ್ಕೇಸ್ ಖರೀದಿಸಿದ್ದಳು. ಸೂಟ್ಕೇಸ್ನಲ್ಲಿ ಮೃತದೇಹ ತುಂಬಿಕೊಂಡು ಹೊರಹೋಗುತ್ತಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ.
ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಸೂಟ್ಕೇಸ್ ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.


ಆರೋಪಿ ಮಹಿಳೆ ಕಳೆದ ನಾಲ್ಕು ವರ್ಷಗಳ ಹಿಂದೆ ಪತಿಯನ್ನು ಬಿಟ್ಟು ಈ ಯುವಕನೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ವಾಸವಿದ್ದಳಂತೆ. ಯುವಕ ದೆಹಲಿಯಲ್ಲಿ ಹೇರ್ ಡ್ರೆಸ್ಸರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Join Whatsapp
Exit mobile version