Home ಟಾಪ್ ಸುದ್ದಿಗಳು ವಯಸ್ಕ ಮಹಿಳೆ ವಿವಾಹವಾಗಿ, ಮತಾಂತರವಾದರೆ ಹಸ್ತಕ್ಷೇಪದ ಅಗತ್ಯವಿಲ್ಲ : ಕಲ್ಕತ್ತಾ ಹೈಕೋರ್ಟ್

ವಯಸ್ಕ ಮಹಿಳೆ ವಿವಾಹವಾಗಿ, ಮತಾಂತರವಾದರೆ ಹಸ್ತಕ್ಷೇಪದ ಅಗತ್ಯವಿಲ್ಲ : ಕಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ : ವಯಸ್ಕ ಮಹಿಳೆಯೊಬ್ಬಳು ತನ್ನ ಆಯ್ಕೆಯ ವ್ಯಕ್ತಿಯನ್ನು ವಿವಾಹವಾದರೆ ಮತ್ತು ಸ್ವಇಚ್ಛೆಯಿಂದ ಮತಾಂತರಗೊಳ್ಳಲು ನಿರ್ಧರಿಸಿದರೆ ಹಾಗೂ ತವರು ಮನೆಗೆ ಹಿಂದಿರುಗದಿದ್ದರೆ, ಈ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

ತಮ್ಮ 19 ವರ್ಷದ ಮಗಳು ನಾಪತ್ತೆಯಾಗಿದ್ದಾಳೆಂದು ತಂದೆಯೊಬ್ಬರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ವೇಳೆ ನ್ಯಾ. ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾ. ಅರಿಜಿತ್ ಬ್ಯಾನರ್ಜಿ ಈ ತೀರ್ಪು ನೀಡಿದ್ದಾರೆ.

ಅರ್ಜಿದಾರರ ಮಗಳು ಪಲ್ಲಬಿ ಸರ್ಕಾರ್ ಅನ್ನು ಅಸ್ಮೌಲ್ ಶೇಖ್ ಎಂಬಾತ ಡಿ.7ರಂದು ವಿವಾಹವಾಗಿದ್ದಾನೆ ಎಂದು ಮುರುತಿಯಾ ಪೊಲೀಸ್ ಠಾಣಾಧಿಕಾರಿ ವರದಿ ಸಲ್ಲಿಸಿದ್ದರು.

ತಾನು ಅಸ್ಮೌಲ್ ಜೊತೆ ಸಂಬಂಧ ಹೊಂದಿದ್ದೇನೆ ಮತ್ತು ಆತನೊಂದಿಗೆ ಬದುಕಲು ಇಚ್ಛಿಸಿದ್ದೇನೆ ಎಂದು ಪಲ್ಲಬಿ ನೀಡಿರುವ ಹೇಳಿಕೆಯೂ ವರದಿಯೊಂದಿಗೆ ಲಗತ್ತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಈ ತೀರ್ಪು ನೀಡಿದೆ.

Join Whatsapp
Exit mobile version