Home ಟಾಪ್ ಸುದ್ದಿಗಳು ಮಧ್ಯಪ್ರದೇಶ | ‘ಲವ್ ಜಿಹಾದ್’ ವಿರುದ್ಧದ ಹೊಸ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ 10 ವರ್ಷ ಜೈಲು

ಮಧ್ಯಪ್ರದೇಶ | ‘ಲವ್ ಜಿಹಾದ್’ ವಿರುದ್ಧದ ಹೊಸ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ 10 ವರ್ಷ ಜೈಲು

ಭೋಪಾಲ್ : ಮಧ್ಯಪ್ರದೇಶ ಸರಕಾರ ‘ಲವ್ ಜಿಹಾದ್’ ವಿರುದ್ಧ ಮಾಡಲು ಹೊರಟಿರುವ ಹೊಸ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವಿದೆ.

ತನ್ನ ಸಹ ಸಂಘಟನೆಗಳ ಮುಖಾಂತರ ಬಿಜೆಪಿ ಸೃಷ್ಟಿಸಿರುವ ‘ಲವ್ ಜಿಹಾದ್’ ಕಟ್ಟುಕತೆಗಳ ಪ್ರಕಾರ, ಹಿಂದೂ ಮಹಿಳೆಯರನ್ನು ಮುಸ್ಲಿಮ್ ಪುರುಷರು ಮದುವೆಯಾಗುವ ಉದ್ದೇಶದಿಂದ ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಈ ಸಂಬಂಧ ಕಾನೂನು ತರುವುದಾಗಿ ಬಿಜೆಪಿ ಆಡಳಿತದ ರಾಜ್ಯಗಳು ಘೋಷಿಸಿವೆ.

ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020ರ ಕರಡು ಪ್ರತಿ ಸಿದ್ಧವಾಗಿದ್ದು, ಡಿ.28ರಿಂದ ಆರಂಭಗೊಳ್ಳುವ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಉತ್ತರ ಪ್ರದೇಶ ಸರಕಾರ ಕೂಡ ಇದೇ ಮಾದರಿಯ ಮಸೂದೆಗೆ ತನ್ನ ಸಚಿವ ಸಂಪುಟದಲ್ಲಿ ಸಮ್ಮತಿ ಪಡೆದಿದೆ.  

Join Whatsapp
Exit mobile version