ಬೆಂಗಳೂರು: 9 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಕಾರ್ಮಿಕ ಇಲಾಖೆ ಇನ್ ಸ್ಪೆಕ್ಟರ್ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ಹೋಟೆಲ್ ವೊಂದರ ಪರವಾನಗಿ ಕೊಡಲು ಕಾರ್ಮಿಕ ಇಲಾಖೆ ಇನ್ ಸ್ಪೆಕ್ಟರ್ 9 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟದ್ದ. ಈ ಬಗ್ಗೆ ಮಂಗಳೂರು ಮೂಲದ ಹೋಟೆಲ್ ಮಾಲೀಕ ದೀಕ್ಷಿತ್ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ಲಂಚ ಪಡೆಯುತ್ತಿದ್ದಾಗಲೇ ಕಾರ್ಮಿಕ ಭವನದಲ್ಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ