ಲೋಕ ಸಭಾ ಸ್ಪೀಕರ್: NDA ಅಭ್ಯರ್ಥಿ ಓಂ ಬಿರ್ಲಾಗೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಬೆಂಬಲ

Prasthutha|

ಹೈದ್ರಾಬಾದ್: ಲೋಕ ಸಭಾ ಅಧ್ಯಕ್ಷ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾದ ಓಂ ಬಿರ್ಲಾಗೆ ಮಾಜಿ ಆಂಧ್ರ ಪ್ರದೇಸದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಬೆಂಬಲ ಘೋಷಿಸಿದೆ.

- Advertisement -

ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಸದಸ್ಯ ಕೋಡಿಕುನ್ನಿಲ್ ಸುರೇಶ್ ಅವರನ್ನು ವಿರೋಧ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ 1976ರ ನಂತರ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಅಪರೂಪದ ಚುನಾವಣೆ ನಡೆಯಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ಪೀಕರ್ ಹುದ್ದೆಗೆ ಚುನಾವಣೆಗಳು ಸಾಮಾನ್ಯವಾಗಿದ್ದರೂ, ಲೋಕಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಸ್ವತಂತ್ರ ಭಾರತದಲ್ಲಿ ಕೇವಲ ಮೂರು ಬಾರಿ ಮಾತ್ರ ನಡೆದಿದೆ. 1952, 1967 ಮತ್ತು 1976 ರಲ್ಲಿ ಸ್ಪರ್ಧೆ ನಡೆದಿದೆ.

- Advertisement -

ಲೋಕಸಭೆ ಸ್ಪೀಕರ್ ಚುನಾವಣೆ ಇಂದು ನಡೆಯಲಿದೆ.

Join Whatsapp
Exit mobile version