Home ಟಾಪ್ ಸುದ್ದಿಗಳು ರಾಹುಲ್ ಗಾಂಧಿಗೆ ಮರಳಿದ ಸಂಸತ್ ಸದಸ್ಯತ್ವ: ಲೋಕಸಭೆ ಕಾರ್ಯಾಲಯ ಅಧಿಸೂಚನೆ

ರಾಹುಲ್ ಗಾಂಧಿಗೆ ಮರಳಿದ ಸಂಸತ್ ಸದಸ್ಯತ್ವ: ಲೋಕಸಭೆ ಕಾರ್ಯಾಲಯ ಅಧಿಸೂಚನೆ

ನವದೆಹಲಿ: ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನವನ್ನು ಪುನಃಸ್ಥಾಪಿಸಲಾಗಿದ್ದು, ಇಂದಿನಿಂದ ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ.


ಮಾನಹಾನಿ ಪ್ರಕರಣದ ಕಾನೂನು ಹೋರಾಟದಲ್ಲಿ ಮುನ್ನಡೆ ಸಾಧಿಸಿರುವ ರಾಹುಲ್ ಗಾಂಧಿ ಅವರಿಗೆ ನಾಲ್ಕು ತಿಂಗಳ ಬಳಿಕ ಸಂಸತ್ ಸದಸ್ಯತ್ವ ಸ್ಥಾನ ಲಭಿಸಿದೆ.


ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ್ದ ಸೂರತ್ ನ್ಯಾಯಾಲಯದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಗಾಗಿ, ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಮತ್ತೆ ಸದಸ್ಯತ್ವ ನೀಡಲಾಗಿದೆ. ಈ ಕುರಿತು ಲೋಕಸಭೆ ಕಾರ್ಯಾಲಯವು ಅಧಿಸೂಚನೆ ಹೊರಡಿಸಿದೆ.

Join Whatsapp
Exit mobile version