ಬೀಜಿಂಗ್: ಚೀನಾದಲ್ಲಿ ಕಳೆದ ಒಂದು ವಾರದಿಂದಲೂ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು(ಸೋಮವಾರ) ರಾತ್ರಿಯಿಂದಲೇ ಲಾಕ್’ಡೌನ್ ಘೋಷಿಸಿದೆ. ಉದ್ದೇಶಿತ ಲಾಕ್ ಡೌನ್ ಹಾಗೂ ಪ್ರಯಾಣ ನಿರ್ಬಂಧಗಳನ್ನು ಬಳಸಿ ಚೀನಾ ಲಾಕ್ ಡೌನ್ ಘೋಷಿಸಿದೆ.
ಇತ್ತೀಚಿನ ದಿನಗಳಲ್ಲಿ ಕೊರೋನಾ ರೂಪಾಂತರಿಯಾದ ಓಮಿಕ್ರಾನ್ ಚೀನಾದ ಅನೇಕ ನಗರಗಳಲ್ಲಿ ತನ್ನ ಹಿಡಿತ ಸಾಧಿಸಿದೆ. ಹಾಗಾಗಿ, ಈಶಾನ್ಯ ಭಾಗದ 2ನೇ ಅತಿದೊಡ್ಡ ನಗರವಾದ ಜಿಲಿನ್ ನಲ್ಲಿ ಸೋಮವಾರ ರಾತ್ರಿಯಿಂದಲೇ ಮೂರು ದಿನಗಳ ವರೆಗೆ ಲಾಕ್ ಡೌನ್ ಘೋಷಿಸಿದೆ. ಈ ಪ್ರಾಂತ್ಯದಲ್ಲಿ 4.5 ಮಿಲಿಯನ್ ನಷ್ಟು ಜನಸಂಖ್ಯೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಚೀನಾದಲ್ಲಿ 4 ಸಾವಿರಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ.