Home ಟಾಪ್ ಸುದ್ದಿಗಳು ಕೊರೊನ ಸಂಕಷ್ಟ | 2 ವಾರ ವಿದೇಶಿ ನಾಗರಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ ಕುವೈತ್

ಕೊರೊನ ಸಂಕಷ್ಟ | 2 ವಾರ ವಿದೇಶಿ ನಾಗರಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ ಕುವೈತ್

ಕುವೈತ್ ಸಿಟಿ : ಕೊರೊನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕುವೈತ್ ಸರಕಾರ ವಿದೇಶಿ ನಾಗರಿಕರಿಗೆ ಎರಡು ವಾರಗಳ ಪ್ರವೇಶ ನಿರ್ಬಂಧ ಹೇರಿದೆ. ಭಾನುವಾರದಿಂದ ಈ ನಿರ್ಬಂಧ ಆದೇಶ ಅನ್ವಯವಾಗಲಿದೆ.

ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ವಾಣಿಜ್ಯ ಚಟುವಟಿಕೆಗಳಿಗೂ ನಿಯಂತ್ರಣ ಹೇರಲಾಗಿದೆ. ವೈದ್ಯಕೀಯ ಸಂಬಂಧಿ ಚಟುವಟಿಕೆಗಳು, ಮೆಡಿಕಲ್ ಗಳು ಮತ್ತು ದಿನಸಿ ಅಂಗಡಿಗಳಿಗೆ ಇದರಿಂದ ವಿನಾಯ್ತಿ ಇದೆ.

ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಜಿಮ್ ಕೇಂದ್ರಗಳು, ಸೆಲೂನ್ ಗಳು ಮತ್ತು ಕ್ರೀಡಾ ಕೂಟಗಳಿಗೂ ನಿಷೇಧ ಹೇರಲಾಗಿದೆ.

Join Whatsapp
Exit mobile version